ADVERTISEMENT

Covid-19 India Update: ಮಹಾರಾಷ್ಟ್ರದಲ್ಲಿ ಒಂದೇ ದಿನ 18,056 ಕೊರೊನಾ ಪ್ರಕರಣ

ಏಜೆನ್ಸೀಸ್
Published 27 ಸೆಪ್ಟೆಂಬರ್ 2020, 15:56 IST
Last Updated 27 ಸೆಪ್ಟೆಂಬರ್ 2020, 15:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಪ್ರಸರಣ ಮುಂದುವರಿದಿದೆ.

ಭಾನುವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 18,056 ಮಂದಿಗೆ ಸೋಂಕು ತಗುಲಿದ್ದು, 380 ಮಂದಿ ಅಸುನೀಗಿದ್ದಾರೆ. ಇದರೊಂದಿಗೆ ರಾಜ್ಯದ ಸೋಂಕಿತರ ಸಂಖ್ಯೆ 13,39,232 ತಲುಪಿದೆ. ಈವರೆಗೆ 35,571 ಸಾವು ಸಂಭವಿಸಿದೆ. 2,73,228 ಸಕ್ರಿಯ ಪ್ರಕರಣಗಳಿವೆ.

ಮುಂಬೈ ನಗರವೊಂದರಲ್ಲೇ 2,261 ಪ್ರಕರಣ, 44 ಸಾವು ವರದಿಯಾಗಿದೆ. ಅಲ್ಲಿ ಸದ್ಯ 26,593 ಸಕ್ರಿಯ ಪ್ರಕರಣಗಳಿವೆ.

ADVERTISEMENT

ಪಶ್ಚಿಮ ಬಂಗಾಳದಲ್ಲಿ 3,185 ಮಂದಿಗೆ ಸೋಂಕು ತಗುಲಿದ್ದು, 60 ಮಂದಿ ಅಸುನೀಗಿದ್ದಾರೆ. 2,946 ಮಂದಿ ಗುಣಮುಖರಾಗಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 3,292 ಪ್ರಕರಣ ದೃಢಪಟ್ಟಿದ್ದು, 42 ಮಂದಿ ಮೃತಪಟ್ಟಿದ್ದಾರೆ. 3,739 ಸೋಂಕಿತರು ಇಂದು ಗುಣಮುಖರಾಗಿದ್ದಾರೆ.

ತಮಿಳುನಾಡಿನಲ್ಲಿ 5,791 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, 80 ಮಂದಿ ಸಾವಿಗೀಡಾಗಿದ್ದಾರೆ. 5,706 ಮಂದಿ ಚೇತರಿಸಿಕೊಂಡಿದ್ದಾರೆ.

ಉಳಿದಂತೆ ಉತ್ತರ ಪ್ರದೇಶದಲ್ಲಿ 4,403, ಆಂಧ್ರಪ್ರದೇಶದಲ್ಲಿ 6,923, ಕರ್ನಾಟಕದಲ್ಲಿ 9,543, ಜಮ್ಮು–ಕಾಶ್ಮೀರದಲ್ಲಿ 1,141, ಪಂಜಾಬ್‌ನಲ್ಲಿ 1,458, ಹರಿಯಾಣದಲ್ಲಿ 1,515 ಪ್ರಕರಣಗಳು ದೃಢಪಟ್ಟಿವೆ.

ಭಾನುವಾರ ಬೆಳಿಗ್ಗೆ ವೇಳೆಗೆ ಕೊನೆಗೊಂಡ 24 ಗಂಟೆಗಳಲ್ಲಿ ದೇಶದಾದ್ಯಂತ 88,600 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದರೊಂದಿಗೆ ಸೋಂಕಿತರ ಸಂಖ್ಯೆ 60 ಲಕ್ಷ ಸನಿಹ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.