ADVERTISEMENT

ಲಾಕ್‌ಡೌನ್‌ ಇದ್ದರೂ ನೌಕರರಿಗೆ ವೇತನ ಹೆಚ್ಚಳ ಮಾಡಿದ ಬಾಬಿ ಚೆಮ್ಮನ್ನೂರ್ ಗ್ರೂಪ್

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 9:24 IST
Last Updated 7 ಏಪ್ರಿಲ್ 2020, 9:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರಂ: ಕೊರೊನಾವೈರಸ್ ಲಾಕ್‍ಡೌನ್‌ನಿಂದಾಗಿಬಹುತೇಕ ಎಲ್ಲ ಕಂಪನಿಗಳು ತಮ್ಮ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವಾಗ ಕೇರಳದ ಬಾಬಿ ಚೆಮ್ಮನ್ನೂರ್ ಗ್ರೂಪ್ತಮ್ಮ ನೌಕರರವೇತನ ಹೆಚ್ಚಳ ಮಾಡಲು ನಿರ್ಧರಿಸಿದೆ.

ಜ್ಯುವೆಲ್ಲರಿ, ಫೈನಾನ್ಸ್, ರೆಸಾರ್ಟ್, ಟೂರ್ಸ್ ಅಂಡ್ ಟ್ರಾವೆಲ್ ಕಂಪನಿಗಳನ್ನು ಹೊಂದಿರುವ ಚೆಮ್ಮನ್ನೂರ್ ಗ್ರೂಪ್, ಜ್ಯುವೆಲ್ಲರಿ ನೌಕರರ ವೇತನದಲ್ಲಿ ಶೇ.25ರಷ್ಟು ಹೆಚ್ಚಳ ನೀಡಲು ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಚೆಮ್ಮನ್ನೂರ್ ಇಂಟರ್‌ನ್ಯಾಷನಲ್ ಜ್ಯುವೆಲ್ಲರ್ಸ್,ಚೆಮ್ಮನ್ನೂರ್ ಕ್ರೆಡಿಟ್ಸ್ ಅಂಡ್ ಇನ್‌ವೆಸ್ಟ್‌ಮೆಂಟ್ ಲಿಮಿಟೆಡ್, ಬಾಬಿ ಚೆಮ್ಮನ್ನೂರ್ (ನಂ.1) ಚಿಟ್ಸ್ ಪ್ರೈ.ಲಿಮಿಟೆಡ್, ಬಾಬಿ ಚೆಮ್ಮನ್ನೂರ್ ನಿಧಿ ಲಿಮಿಟೆಡ್, ಬಾಬಿ ಬಜಾರ್,ಆಕ್ಸಿಜನ್ ರೆಸಾರ್ಟ್ಸ್, ಬಾಬಿ ಟೂರ್ಸ್ ಅಂಡ್ ಟ್ರಾವೆಲ್ಸ್, ಫಿಗಿಕಾರ್ಟ್ ಮತ್ತು ಇತರ ನೌಕರರವೇತನ ಹೆಚ್ಚಳ ಮಾಡಲಿದ್ದು,ವಿವಿಧ ಕ್ಷೇತ್ರಗಳಲ್ಲಿ ನಮ್ಮ ಬೆಳವಣಿಗಾಗಿ ಸಹಕರಿಸಿದ 5 ಲಕ್ಷ ನೌಕರರ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಬಾಬಿ ಚೆಮ್ಮನ್ನೂರ್ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿರುವ 5 ಲಕ್ಷ ನೌಕರರಲ್ಲಿ ಹೆಚ್ಚಿನವರು ಕಮಿಷನ್ ಆಧಾರದಲ್ಲಿ ಕೆಲಸ ಮಾಡುವವರಾಗಿದ್ದಾರೆ.ಸುಮಾರು 70,000 ಮಹಿಳೆಯರು ಕಿರು ಹಣಕಾಸು ಉದ್ಯಮದಲ್ಲಿದ್ದಾರೆ. ಇದು ಜಂಟಿ ಉದ್ಯಮವಾಗಿದ್ದು ಅವರಿಗೂ ಸೌಲಭ್ಯ ಸಿಗಲಿದೆ ಎಂದು ಬಾಬಿ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಹೆಚ್ಚಿನ ಶ್ರದ್ಧೆ, ಸೇವೆಯಲ್ಲಿ ತೊಡಿಸಿಕೊಳ್ಳುವಿಕೆಯನ್ನು ಪರಿಗಣಿಸಿ ನೌಕರರಿಗೆ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡುವ ಸಲುವಾಗಿ ವೇತನದಲ್ಲಿ ಹೆಚ್ಚಳ ಮಾಡಲಾಗಿದೆ ಎಂದುಬಾಬಿ ಚೆಮ್ಮನ್ನೂರ್ ಇಂಟರ್‌ನ್ಯಾಷನಲ್ ಗ್ರೂಪ್‌ನ ಎಚ್.ಆರ್ ಮುಖ್ಯಸ್ಥರಾಗಿರುವ ರಾಜನ್ ಮೆನನ್ ಹೇಳಿದ್ದಾರೆ. ಹಲವಾರು ಸಂಸ್ಥೆಗಳಲ್ಲಿ ವರ್ಕ್ ಫ್ರಂ ಹೋಮ್ ಸೌಲಭ್ಯವನ್ನೂ ನೀಡಲಾಗಿದೆ. ಸರ್ಕಾರ ಮತ್ತು ಆರೋಗ್ಯ ಇಲಾಖೆ ನೀಡುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಅವರಿಗೆ ಸಲಹೆ ನೀಡಲಾಗಿದೆ ಎಂದು ಮೆನನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.