ADVERTISEMENT

ಲಾಕ್‌ಡೌನ್: ಕೆಂಪು ವಲಯಗಳ ವಿಮಾನ ನಿಲ್ದಾಣ ಕಾರ್ಯಾಚರಣೆ ಇಲ್ಲ ಎಂದ ಮಹಾರಾಷ್ಟ್ರ

ಏಜೆನ್ಸೀಸ್
Published 24 ಮೇ 2020, 5:32 IST
Last Updated 24 ಮೇ 2020, 5:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮಹಾರಾಷ್ಟ್ರದಲ್ಲಿ ಕೆಂಪು ವಲಯಗಳಲ್ಲಿರುವ ವಿಮಾನ ನಿಲ್ದಾಣಗಳು ಕಾರ್ಯಾಚರಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಭಾನುವಾರ ಸ್ಪಷ್ಟಪಡಿಸಿದೆ. ದೇಶೀಯ ವಿಮಾನ ಸಂಚಾರ ಸೋಮವಾರದಿಂದ ಪುನರಾರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಸ್ಪಷ್ಟನೆ ನೀಡಿದೆ.

ಕೆಂಪು ವಲಯಗಳಲ್ಲಿ ವಿಮಾನ ನಿಲ್ದಾಣಗಳು ಕಾರ್ಯಾಚರಣೆ ಮಾಡಬೇಕು ಎಂದು ಸಲಹೆ ನೀಡುವುದು ಸಾಧುವಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಹೇಳಿದ್ದಾರೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪುಣೆ, ನಾಗ್ಪುರದಲ್ಲಿರುವ ವಿಮಾನ ನಿಲ್ದಾಣಗಳು ಕೆಂಪು ವಲಯಗಳಲ್ಲಿ ಬರುತ್ತವೆ.

ADVERTISEMENT

‘ಈ ಹಂತದಲ್ಲಿ ಬಸ್, ಆಟೊ, ಟ್ಯಾಕ್ಸಿ ಓಡಾಟ ಕಷ್ಟ. ಒಬ್ಬ ಸೋಂಕಿತ ಪ್ರಯಾಣಿಕನಿದ್ದರೂ ಕೆಂಪು ವಲಯಗಳ ಒತ್ತಡ ಮತ್ತಷ್ಟು ಹೆಚ್ಚಾಗಲಿದೆ’ ಎಂದು ದೇಶ್‌ಮುಖ್ ಹೇಳಿದ್ದಾರೆ.

ಹಸಿರು ವಲಯಗಳಿಂದ ಪ್ರಯಾಣಿಕರನ್ನು ಕೆಂಪು ವಲಯಗಳಿಗೆ ಕರೆತರುವುದೂ ಅಪಾಯಕಾರಿ. ಹಾಗೆ ಮಾಡಲಾಗದು ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.