ADVERTISEMENT

ಪಿಎಂ-ಕೇರ್ಸ್ ನಿಧಿಗೆ ₹ 25,000 ದೇಣಿಗೆ ನೀಡಿದ ನರೇಂದ್ರ ಮೋದಿ ತಾಯಿ ಹೀರಾ ಬೆನ್

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 14:14 IST
Last Updated 31 ಮಾರ್ಚ್ 2020, 14:14 IST
ಹೀರಾ ಬೆನ್ ಜತೆ  ಮೋದಿ  (ಸಂಗ್ರಹ ಚಿತ್ರ)
ಹೀರಾ ಬೆನ್ ಜತೆ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಪ್ರಧಾನ ಮಂತ್ರಿಯವರ ಪಿಎಂ- ಕೇರ್ಸ್ ನಿಧಿಗೆ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್ ₹25,000 ದೇಣಿಗೆ ನೀಡಿದ್ದಾರೆ ಎಂದು ಸರ್ಕಾರದ ಮೂಲಗಳು ಹೇಳಿವೆ.

98ರ ಹರೆಯದ ಹೀರಾಬೆನ್ ಅವರು ಗುಜರಾತಿನ ಗಾಂಧೀನಗರದ ಬಳಿ ರೈಸಿನ್ ಗ್ರಾಮದಲ್ಲಿ ತನ್ನ ಕಿರಿಯ ಮಗ ಪಂಕಜ್ ಮೋದಿ ಜತೆ ವಾಸವಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂಗೆ ಕರೆ ನೀಡಿ, ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸಲು ಚಪ್ಪಾಳೆ ಹೊಡೆಯುವಂತೆ ಹೇಳಿದ್ದರು. ಹೀರಾ ಬೆನ್ ಇದಕ್ಕೂ ಬೆಂಬಲ ನೀಡಿದ್ದರು.

ADVERTISEMENT

ಕೊರೊನಾ ವಿರುದ್ಧ ಹೋರಾಡುವುದಕ್ಕಾಗಿ ಮತ್ತು ತುರ್ತು ಪರಿಹಾರ ಒದಗಿಸುವ ಸಲುವಾಗಿ ಪಿಎಂ-ಕೇರ್ಸ್ ನಿಧಿ ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.