ADVERTISEMENT

ಚೈತನ್ಯ ಬಘೆಲ್‌ಗೆ 14 ದಿನ ನ್ಯಾಯಾಂಗ ಬಂಧನ

ಪಿಟಿಐ
Published 22 ಜುಲೈ 2025, 15:58 IST
Last Updated 22 ಜುಲೈ 2025, 15:58 IST
ಚೈತನ್ಯ ಬಘೆಲ್
ಚೈತನ್ಯ ಬಘೆಲ್   

ರಾಯಪುರ: ಅಬಕಾರಿ ಹಗರಣಕ್ಕೆ ಸಂಬಂಧಿಸಿ, ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್‌ ಬಘೆಲ್ ಅವರ ಪುತ್ರ ಚೈತನ್ಯ ಬಘೆಲ್ ಅವರನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚೈತನ್ಯ ಮನೆಯಲ್ಲಿ ಶೋಧ ನಡೆಸಿದ್ದ ಜಾರಿ ನಿರ್ದೇಶನಾಲಯ (ಇ.ಡಿ) ಜುಲೈ 18ರಂದು ಅವರನ್ನು ಬಂಧಿಸಿತ್ತು. ಅವರ ಇ.ಡಿ ಕಸ್ಟಡಿ ಅವಧಿಯು ಅಂತ್ಯಗೊಂಡ ಕಾರಣ ಮಂಗಳವಾರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

‘ಚೈತನ್ಯ ಅವರನ್ನು ನ್ಯಾಯಾಲಯವು ಆಗಸ್ಟ್‌ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಅಗತ್ಯಬಿದ್ದರೆ ನ್ಯಾಯಾಲಯದ ಅನುಮತಿ ಮೇರೆಗೆ ಇ.ಡಿ ವಿಚಾರಣೆ ನಡೆಸಬಹುದು’ ಎಂದು ಇ.ಡಿ ಪರ ವಕೀಲರು ತಿಳಿಸಿದ್ದಾರೆ.

ADVERTISEMENT

‘ಚೈತನ್ಯ ಅವರು ಅಬಕಾರಿ ಹಗರಣದ ಮೂಲಕ ₹1000 ಕೋಟಿ ಗಳಿಸಿದ್ದಾರೆ. ಅದರಲ್ಲಿ ₹16.7 ಕೋಟಿಯನ್ನು ತಮ್ಮ ರಿಯಲ್ ಎಸ್ಟೇಟ್ ಯೋಜನೆಗೆ ಬಳಸಿಕೊಂಡಿದ್ದಾರೆ’ ಎಂದು ಇ.ಡಿ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.