ADVERTISEMENT

Covid-19 India Update | ಕಳೆದ 24 ಗಂಟೆಗಳಲ್ಲಿ 64,531 ಪ್ರಕರಣ, 1,092 ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಆಗಸ್ಟ್ 2020, 4:45 IST
Last Updated 19 ಆಗಸ್ಟ್ 2020, 4:45 IST
ಕೊರೊನಾ ವೈರಸ್ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್ (ಸಾಂದರ್ಭಿಕ ಚಿತ್ರ)   

ನವದೆಹಲಿ: ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ದೇಶದಾದ್ಯಂತ ಇಂದು 64,531 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಕಳೆದ 24 ಗಂಟೆಗಳಲ್ಲಿ 1,092 ಮಂದಿ ಮೃತಪಟ್ಟಿದ್ದಾರೆ.

ಇದರೊಂದಿಗೆ ದೇಶದಲ್ಲಿ ಈವರೆಗೆ 27,67,274 ಮಂದಿಗೆ ಸೋಂಕು ತಗುಲಿದ್ದು, 52,889 ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ 20,37,871 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 6,76,514 ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ 6,04,358 ಜನರಿಗೆ ಸೋಂಕು ತಗುಲಿದೆ. 1,55,579 ಸಕ್ರಿಯ ಪ್ರಕರಣಗಳೊಂದಿಗೆ ಇದುವರೆಗೆ 4,28,514 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ ಒಟ್ಟಾರೆ 20,265 ಮಂದಿ ಕೋವಿಡ್-19ನಿಂದ ಮೃತಪಟ್ಟಿದ್ದಾರೆ.

ADVERTISEMENT

ತಮಿಳುನಾಡಿನಲ್ಲಿ ಈವರೆಗೂ 3,43,945 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, 2,83,937 ಮಂದಿ ಗುಣಮುಖರಾಗಿದ್ದಾರೆ. 54,122 ಸಕ್ರಿಯ ಪ್ರಕರಣಗಳಿದ್ದು, 5,886 ಮಂದಿ ಕೊರೊನಾ ವೈರಸ್‌ನಿಂದಾಗಿ ಸಾವಿಗೀಡಾಗಿದ್ದಾರೆ.

ಆಂದ್ರ ಪ್ರದೇಶದಲ್ಲೂ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಈವರೆಗೂ 2,96,609 ಜನರಿಗೆ ಸೋಂಕು ತಗುಲಿದೆ. 84,777 ಸಕ್ರಿಯ ಪ್ರಕರಣಗಳೊಂದಿಗೆ 2,09,100 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ 2,732 ಜನರು ಸಾವಿಗೀಡಾಗಿದ್ದಾರೆ.

ರಾಜಧಾನಿ ದೆಹಲಿಯಲ್ಲಿ 1,53,367 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದುವರೆಗೆ 4,214 ಮಂದಿ ಕೊನೆಯುಸಿರೆಳೆದಿದ್ದಾರೆ. 10,852 ಸಕ್ರಿಯ ಪ್ರಕರಣಗಳೊಂದಿಗೆ 1,38,301 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಈವರೆಗೂ 1,58,216 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, 1,04,808 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 50,893 ಸಕ್ರಿಯ ಪ್ರಕಗಳೊಂದಿಗೆ ಒಟ್ಟಾರೆ 2,515 ಜನರು ಮೃತಪಟ್ಟಿದ್ದಾರೆ.

ಇನ್ನುಳಿದಂತೆ ಗುಜರಾತ್‌ನಲ್ಲಿ 2,800, ಪಶ್ಚಿಮ ಬಂಗಾಳದಲ್ಲಿ 2,473, ಉತ್ತರ ಪ್ರದೇಶ 2,515, ಮಧ್ಯ ಪ್ರದೇಶ 1,128 ಮತ್ತು ರಾಜಸ್ಥಾನದಲ್ಲಿ 887 ಜನರು ಕೊರೊನಾ ವೈರಸ್‌ನಿಂದ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.