ADVERTISEMENT

ದೆಹಲಿ: ಸಿಆರ್‌ಪಿಎಫ್‌ನ 68 ಯೋಧರಲ್ಲಿ ಕೊರೊನಾ ದೃಢ

ಏಜೆನ್ಸೀಸ್
Published 2 ಮೇ 2020, 4:56 IST
Last Updated 2 ಮೇ 2020, 4:56 IST
ಸಂದರ್ಭಿಕ ಚಿತ್ರ
ಸಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 68 ಯೋಧರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇವರು ಪೂರ್ವ ದೆಹಲಿಯಲ್ಲಿರುವ ಬೆಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟಾರೆಯಾಗಿ ಈ ಬೆಟಾಲಿಯನ್‌ನ 122 ಯೋಧರಿಗೆ ಈವರೆಗೆ ಸೋಂಕು ತಗುಲಿದೆ.

ಇದೇ ಬೆಟಾಲಿಯನ್‌ನ 55 ವರ್ಷ ವಯಸ್ಸಿನ ಸಿಬ್ಬಂದಿಯೊಬ್ಬರು ಮಾರ್ಚ್‌ 28ರಂದು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. ಮತ್ತೊಬ್ಬರು ಗುಣಮುಖರಾಗಿದ್ದಾರೆ. ಇಡೀ ಬೆಟಾಲಿಯನ್‌ನ 1,100 ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಈವರೆಗೆ ಒಟ್ಟಾರೆಯಾಗಿ ಸಿಆರ್‌ಪಿಎಫ್‌ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 127ಕ್ಕೆ ಏರಿಕೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.