ADVERTISEMENT

Covid-19 India Update: ಸತತ 3ನೇ ದಿನ ದೇಶದಲ್ಲಿ ಎರಡು ಲಕ್ಷಕ್ಕೂ ಅಧಿಕ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 5:11 IST
Last Updated 17 ಏಪ್ರಿಲ್ 2021, 5:11 IST
   

ನವದೆಹಲಿ:ದೇಶದಲ್ಲಿ ಸತತ ಮೂರನೇ ದಿನವೂ 2 ಲಕ್ಷಕ್ಕಿಂತ ಹೆಚ್ಚುಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 1,45,26,609ಗೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಕಳೇದ24 ಗಂಟೆಗಳಲ್ಲಿ ಬರೋಬ್ಬರಿ2,34,692 ಹೊಸ ಪ್ರಕರಣಗಳು ವರದಿಯಾಗಿದ್ದು, ಇದೇ ವೇಳೆ1,341 ಸೋಂಕಿತರು ಮೃತಪಟ್ಟಿದ್ದಾರೆ.1,23,354 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಸೋಂಕು ಕಾಣಿಸಿಕೊಂಡಾಗಿನಿಂದ ಇದುವರೆಗೆ ಒಟ್ಟು1,26,71,220 ಸೋಂಕಿತರು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 1,75,649ಕ್ಕೆ ತಲುಪಿದೆ. ಇನ್ನೂ 16,79,740 ಪ್ರಕರಣಗಳು ಸಕ್ರಿಯವಾಗಿವೆ.

ADVERTISEMENT

ಕಳೆದ24 ಗಂಟೆಗಳಲ್ಲಿ (30,04,544 ) ನೀಡಿರುವುದೂ ಸೇರಿ ಈವರೆಗೆ ಒಟ್ಟು11,99,37,641ಜನರಿಗೆಲಸಿಕೆ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.