ADVERTISEMENT

Covid-19 India Update: ಒಂದೇ ದಿನ 16 ಸಾವಿರಕ್ಕೂ ಹೆಚ್ಚು ಮಂದಿಗೆ ಕೋವಿಡ್

ಏಜೆನ್ಸೀಸ್
Published 26 ಫೆಬ್ರುವರಿ 2021, 4:32 IST
Last Updated 26 ಫೆಬ್ರುವರಿ 2021, 4:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್–19 ಸೋಂಕಿಗೀಡಾಗುತ್ತಿರುವವರ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ. ಒಂದೇ ದಿನ 16,577 ಜನರಲ್ಲಿ ಸೋಂಕು ದೃಢಪಟ್ಟಿದ್ದು, 120 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಈವರೆಗೆ ಸೋಂಕು ತಗುಲಿದವರ ಒಟ್ಟು ಸಂಖ್ಯೆ 1,10,63,491 ತಲುಪಿದ್ದು, 1,56,825 ಮಂದಿ ಅಸುನೀಗಿದ್ದಾರೆ.

ಚೇತರಿಸಿಕೊಂಡವರ ಸಂಖ್ಯೆ 1,07,50,680 ತಲುಪಿದೆ. ಒಂದೇ ದಿನ 12,179 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲೀಗ ಚೇತರಿಕೆ ಪ್ರಮಾಣ ಶೇ 97.21 ಆಗಿದ್ದು, ಸಾವಿನ ಪ್ರಮಾಣ ಶೇ 1.42ರಷ್ಟಿದೆ.

ADVERTISEMENT

ಸದ್ಯ 1,55,986 ಸಕ್ರಿಯ ಪ್ರಕರಣಗಳಿವೆ. ಇದು ದೇಶದ ಒಟ್ಟು ಸೋಂಕು ಪ್ರಕರಣಗಳ ಶೇ 1.37ರಷ್ಟಾಗಿದೆ.

ಕೋವಿಡ್–19 ವಿರುದ್ಧ ಲಸಿಕೆ ನೀಡಿಕೆ ಪ್ರಕ್ರಿಯೆ ದೇಶದಾದ್ಯಂತ ಪ್ರಗತಿಯಲ್ಲಿದ್ದು, ಈವರೆಗೆ 1,34,72,643 ಡೋಸ್ ಲಸಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.