ADVERTISEMENT

Covid-19 india updates: 239 ದಿನಗಳಲ್ಲೇ ಕಡಿಮೆ ಮಟ್ಟಕ್ಕೆ ಸಕ್ರಿಯ ಪ್ರಕರಣಗಳು

ಪಿಟಿಐ
Published 22 ಅಕ್ಟೋಬರ್ 2021, 5:19 IST
Last Updated 22 ಅಕ್ಟೋಬರ್ 2021, 5:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 24 ಗಂಟೆಗಳಲ್ಲಿ ದೇಶದಲ್ಲಿ 15,786 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 231 ಸಾವು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಇದೇ ಅವಧಿಯಲ್ಲಿ 18,641 ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದು, ಸದ್ಯ, ಸಕ್ರಿಯ ಪ್ರಕರಣಗಳ ಸಂಖ್ಯೆ 1,75,745 ರಷ್ಟಿದೆ. ಇದು 239 ದಿನಗಳಲ್ಲೇ ಕಡಿಮೆಯಾಗಿದೆ

ಈ ಮೂಲಕ ಈವರೆಗೆ ಕೋವಿಡ್‌ ಸೋಂಕಿತರ ಒಟ್ಟು ಸಂಖ್ಯೆ 3,41,43,236ಕ್ಕೆ ಏರಿದ್ದು, ಒಟ್ಟು 4,53,042 ಮಂದಿ ಕೋವಿಡ್‌ನಿಂದ ಅಸುನೀಗಿದ್ದಾರೆ.

ADVERTISEMENT

ಸತತ 28ನೇ ದಿನ ಕೊರೊನಾ ದೃಢಪಟ್ಟವರ ದೈನಂದಿನ ಸಂಖ್ಯೆ 30 ಸಾವಿರಕ್ಕೂ ಕಡಿಮೆ ಇದೆ. 117 ದಿನಗಳಿಂದ 50 ಸಾವಿರಕ್ಕೂ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ.

ಕೋವಿಡ್‌ನಿಂದ ಚೇತರಿಕೆಯ ಪ್ರಮಾಣ ಶೇಕಡಾ 98.16 ರಷ್ಟಿದೆ.

24 ಗಂಟೆಗಳಲ್ಲಿ 13,24,263 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ದೈನಂದಿನ ಕೋವಿಡ್ ದೃಢ ಪ್ರಮಾಣ ಶೇಕಡಾ 1.19 ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.