ADVERTISEMENT

Covid-19 India Update: 42,909 ಹೊಸ ಪ್ರಕರಣ, 380 ಸಾವು

ಡೆಕ್ಕನ್ ಹೆರಾಲ್ಡ್
Published 30 ಆಗಸ್ಟ್ 2021, 5:20 IST
Last Updated 30 ಆಗಸ್ಟ್ 2021, 5:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಸೋಮವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ 42,909 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 380 ಮಂದಿ ಸೋಂಕಿತರು ಮತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

34,763 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 3,76,324 ಸಕ್ರಿಯ ಪ್ರಕರಣಗಳಿವೆ.

ಕೇರಳದಲ್ಲಿ ಹೊಸದಾಗಿ ಸೋಂಕಿತರಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಮುಂದುವರಿದಿದೆ. ಅಲ್ಲಿ 24 ಗಂಟೆ ಅವಧಿಯಲ್ಲಿ 29,836 ಪ್ರಕರಣಗಳು ದೃಢಪಟ್ಟಿದ್ದು, 75 ಸಾವು ವರದಿಯಾಗಿದೆ.

ADVERTISEMENT

ದೇಶದಲ್ಲಿ ಕೋವಿಡ್‌ನಿಂದ ಸಂಭವಿಸುವ ಸಾವಿನ ಪ್ರಮಾಣ ಸದ್ಯ ಶೇ 1.34ರಷ್ಟಿದೆ. ಈವರೆಗೆ 4,38,210 ಸೋಂಕಿತರು ಅಸುನೀಗಿದ್ದಾರೆ.

ದೇಶದಾದ್ಯಂತ ಈವರೆಗೆ 63.43 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.