ADVERTISEMENT

Covid-19 India Update: ಸಾವಿನ ಸಂಖ್ಯೆ ಇಳಿಕೆ, 1.27 ಲಕ್ಷ ಹೊಸ ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 5:07 IST
Last Updated 1 ಜೂನ್ 2021, 5:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್–19 ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಮತ್ತು ಹೊಸದಾಗಿ ಸೋಂಕಿತರಾಗುತ್ತಿರುವವರ ಸಂಖ್ಯೆಯಲ್ಲಿ ಮಂಗಳವಾರ ಇಳಿಕೆ ಕಂಡುಬಂದಿದೆ.

24 ಗಂಟೆ ಅವಧಿಯಲ್ಲಿ 1,27,510 ಹೊಸ ಪ್ರಕರಣಗಳು ದೃಢಪಟ್ಟಿದ್ದು, 2,795 ಸಾವು ಸಂಭವಿಸಿದೆ. ಇದು ಒಂದು ತಿಂಗಳ ಅವಧಿಯಲ್ಲಿ ದಿನವೊಂದರಲ್ಲಿ ದಾಖಲಾದ ಕಡಿಮೆ ಸಾವಾಗಿದೆ.

2,55,287 ಮಂದಿ ಚೇತರಿಸಿಕೊಂಡಿದ್ದು, ಸದ್ಯ ದೇಶದಲ್ಲಿ 18,95,520 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಸೋಂಕಿನಿಂದಾಗಿ ಒಟ್ಟು 3,31,895 ಜನ ಮೃತಪಟ್ಟಿದ್ದು, ಸಾವಿನ ಪ್ರಮಾಣ ಶೇ 1.18ರಷ್ಟಿದೆ.

ADVERTISEMENT

ಈವರೆಗೆ 21,60,46,638 ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಮೇ 31ರ ವರೆಗೆ 34,67,92,257 ಮಾದರಿಗಳ ಪರೀಕ್ಷೆಗೆ ನಡೆಸಲಾಗಿದೆ. ಸೋಮವಾರ ಒಂದೇ ದಿನ 19,25,374 ಮಾದರಿಗಳನಡೆಸಲಾಗಿದೆಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.