ADVERTISEMENT

Covid-19 India Updates: ದೇಶದಲ್ಲಿ 27,553 ಹೊಸ ಕೋವಿಡ್ ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 5:42 IST
Last Updated 2 ಜನವರಿ 2022, 5:42 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಲ್ಲಿ 27,553 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಒಂದೇ ದಿನ 9,249 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಕೋವಿಡ್ ಚೇತರಿಕೆ ಪ್ರಮಾಣ ಶೇಕಡ 98 ರಷ್ಟಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ.

284 ಮಂದಿ ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ. ಆ ಮೂಲಕ ಮೃತರ ಸಂಖ್ಯೆ 4,81,294ಕ್ಕೆ ಏರಿಕೆಯಾಗಿದೆ. ಓಮೈಕ್ರಾನ್‌ನ ಸೋಂಕಿತರ ಒಟ್ಟು ಸಂಖ್ಯೆ 1,525ಕ್ಕೆ ಜಿಗಿದಿದೆ.

ಮಹಾರಾಷ್ಟ್ರದಲ್ಲಿ 9,170, ಪಶ್ಚಿಮ ಬಂಗಾಳದಲ್ಲಿ 4,512. ದೆಹಲಿಯಲ್ಲಿ 2,716 , ಕೇರಳದಲ್ಲಿ 2,435, ತಮಿಳುನಾಡಿನಲ್ಲಿ 1,489 ಪ್ರಕರಣಗಳು ವರದಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.