ADVERTISEMENT

ಅಸ್ಸಾಂ ಮೆಡಿಕಲ್ ಕಾಲೇಜಿನಲ್ಲಿ 5 ಐಸಿಯು, 45 ಆಮ್ಲಜನಕ ಹಾಸಿಗೆ ಸಿದ್ಧಪಡಿಸಿದ ಸೇನೆ

ಏಜೆನ್ಸೀಸ್
Published 14 ಮೇ 2021, 8:52 IST
Last Updated 14 ಮೇ 2021, 8:52 IST
   

ತೇಜ್‌ಪುರ: ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಭಾರತೀಯ ಸೇನಾ ಸಿಬ್ಬಂದಿ ಅಸ್ಸಾಂನ ತೇಜ್‌ಪುರ ಮೆಡಿಕಲ್‌ ಕಾಲೇಜಿನಲ್ಲಿ ಐದು ಐಸಿಯು ಮತ್ತು ಆಮ್ಲಜನಕ ಸೌಲಭ್ಯವುಳ್ಳ45 ಹಾಸಿಗೆಯನ್ನು ಸಜ್ಜುಗೊಳಿಸಲಾಗಿದೆ ಎಂದು ಸೇನೆಯು ಶುಕ್ರವಾರ ತಿಳಿಸಿದೆ.

ʼಕೋವಿಡ್-19‌ ವಿರುದ್ಧ ಮುಂದುವರಿದಿರುವ ಹೋರಾಟದ ಭಾಗವಾಗಿ ಭಾರತೀಯ ಸೇನೆಯಈಸ್ಟರ್ನ್ ಕಮಾಂಡ್‌ನ ಗಜರಾಜ್‌ ಸಿಬ್ಬಂದಿ ಐದು ಐಸಿಯು ಮತ್ತುಆಮ್ಲಜನಕ ಸೌಲಭ್ಯವುಳ್ಳ 45 ಹಾಸಿಗೆಗಳನ್ನು ತೇಜ್‌ಪುರ ವೈದ್ಯಕೀಯ ಕಾಲೇಜಿನಲ್ಲಿ ಸಿದ್ಧಪಡಿಸಿದ್ದಾರೆʼ ಎಂದು ಸೇನೆಯು ಟ್ವೀಟ್‌ ಮೂಲಕ ತಿಳಿಸಿದೆ.

ಸೇನೆಯ ನಾಲ್ಕು ಜನರ ವಿಶೇಷ ತಂಡದಕಾರ್ಯಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ʼಆಮ್ಲಜನಕಯುಕ್ತ ಹಾಸಿಗೆಗಳನ್ನು ಹೆಚ್ಚಿಸುವುದು ನಮಗೆ ದೊಡ್ಡ ಸವಾಲಾಗಿ ವೇಗವಾಗಿ ಬೆಳೆಯುತ್ತಿದೆ. ನಮ್ಮ ಮನವಿ ಮೇರೆಗೆ ತೇಜ್‌ಪುರದಲ್ಲಿರುವ ಸೇನೆಯ ನಾಲ್ವರು ಸಿಬ್ಬಂದಿಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿಐದು ಐಸಿಯು ಮತ್ತು ಆಮ್ಲಜನಕ ಸೌಲಭ್ಯವುಳ್ಳ 45 ಹಾಸಿಗೆಗಳನ್ನು ಸಿದ್ಧಪಡಿಸಿದ್ದಾರೆ. ಎಂಥಾ ಸಾಧನೆ! ಅಂತಹ ಶ್ಲಾಘನೀಯ ಕಾರ್ಯ ಮಾಡಿದ ತಂಡಕ್ಕೆ ಕೃತಜ್ಞತೆಗಳುʼ ಎಂದು ಶರ್ಮಾ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.