ADVERTISEMENT

ಮಧ್ಯಪ್ರದೇಶ ಸಿಎಂಗೆ 9ನೇ ದಿನದ ಪರೀಕ್ಷೆಯಲ್ಲೂ ಕೋವಿಡ್‌: ಮುಂದುವರಿದ ಚಿಕಿತ್ಸೆ

ಪಿಟಿಐ
Published 3 ಆಗಸ್ಟ್ 2020, 11:24 IST
Last Updated 3 ಆಗಸ್ಟ್ 2020, 11:24 IST
ಆಸ್ಪತ್ರೆಯ ಕೋವಿಡ್‌ ಆರೈಕೆ ವಿಭಾಗದಲ್ಲಿ ನರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಸರೋಜ ಅವರು ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ರಾಖಿ ಕಟ್ಟಿದರು. ಈ ಚಿತ್ರವನ್ನು ಚೌಹಾಣ್‌ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. 
ಆಸ್ಪತ್ರೆಯ ಕೋವಿಡ್‌ ಆರೈಕೆ ವಿಭಾಗದಲ್ಲಿ ನರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಸರೋಜ ಅವರು ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ರಾಖಿ ಕಟ್ಟಿದರು. ಈ ಚಿತ್ರವನ್ನು ಚೌಹಾಣ್‌ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.    

ಭೋಪಾಲ್‌: ಕೋವಿಡ್‌–19 ದೃಢಪಟ್ಟಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್ ಅವರು ಮತ್ತೊಮ್ಮೆ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು, ಅದರಲ್ಲೂ ಪಾಸಿಟಿವ್‌ ಬಂದಿದೆ. ಅವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಯಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಕೋವಿಡ್‌ ದೃಢಪಟ್ಟ ಕಾರಣ ಜುಲೈ 25ರಂದು ಚೌಹಾಣ್‌ ಭೋಪಾಲ್‌ನ ಚಿರಾಯು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘9ನೇ ದಿನ ನಡೆಸಿದ ಚೌಹಾಣ್‌ ಅವರ ಆರ್‌ಟಿ–ಪಿಸಿಆರ್‌ ಪರೀಕ್ಷೆ ಹಾಗೂ ಸಾರ್ಸ್‌ ಕೋವಿಡ್‌–2 ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್‌ ಬಂದಿದೆ’ ಎಂದು ಆಸ್ಪತ್ರೆಯು ಆರೋಗ್ಯ ಪ್ರಕಟಣೆಯಲ್ಲಿ ತಿಳಿಸಿದೆ.

‘ತಾನು ಆರೋಗ್ಯವಾಗಿದ್ದೇನೆ ಹಾಗೂ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ. ಪರೀಕ್ಷೆಗಾಗಿ ಗಂಟಲ ದ್ರವದ ಮಾದರಿಯನ್ನು ಕಳುಹಿಸಲಾಗಿದೆ. ವರದಿ ನೆಗೆಟಿವ್‌ ಬಂದರೆ ಆಸ್ಪತ್ರೆಯಿಂದ ಮನೆಗೆ ತೆರಳುವುದಾಗಿ’ಭಾನುವಾರ ಚೌಹಾಣ್‌ ಟ್ವೀಟ್‌ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.