ADVERTISEMENT

ವಿದೇಶಿ ದೇಣಿಗೆ ಸ್ವೀಕಾರ: ನಿರ್ಬಂಧ ಕೈಬಿಡಲು ಆಕ್ಸ್‌ಫಂ ಇಂಡಿಯಾ ಮನವಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 11:19 IST
Last Updated 6 ಜನವರಿ 2022, 11:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ವಿದೇಶಿ ದೇಣಿಗೆಯನ್ನು ಸ್ವೀಕರಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಬಂಧ ಹೇರಿರುವುದರಿಂದ 16 ಜಿಲ್ಲೆಗಳಲ್ಲಿ ಕೈಗೊಂಡಿರುವ ಸಾಮಾಜಿಕ ಸೇವೆಯ ಮುಖ್ಯವಾಗಿ ಕೋವಿಡ್‌ ಕುರಿತಕಾರ್ಯಕ್ರಮಗಳಿಗೆ ಸಮಸ್ಯೆಯಾಗಲಿದೆ ಎಂದು ಆಕ್ಸ್‌ಫಂ ಇಂಡಿಯಾ ಹೇಳಿದೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ 2010 ಅನ್ವಯ ಆಕ್ಸ್‌ಫಂ ಇಂಡಿಯಾ ಸೇರಿದಂತೆ ವಿವಿಧ ಕಂಪನಿಗಳಿಗೆ ಲೈಸೆನ್ಸ್ ನವೀಕರಣ ಕೋರಿದ್ದ ಅರ್ಜಿಯನ್ನು ಕೇಂದ್ರ ಗೃಹ ಸಚಿವಾಲಯವು ತಿರಸ್ಕರಿಸಿತ್ತು.

ಆಕ್ಸ್‌ಫಂ ಇಂಡಿಯಾ ಸಿಇಒ ಅಮಿತಾಬ್‌ ಬೆಹರ್ ಅವರು, ಸಚಿವಾಲಯಕ್ಕೆಮನವಿ ಸಲ್ಲಿಸಲಿದ್ದು, ನಿರ್ಬಂಧ ಹಿಂಪಡೆಯಲು ಕೋರುತ್ತೇವೆ. ಇದರಿಂದ ಕೋವಿಡ್‌ ಸಂದರ್ಭದಲ್ಲಿ ಕಷ್ಟದಲ್ಲಿರುವ ಸಮುದಾಯಗಳಿಗೆ ನೆರವು ನೀಡುವುದು ಸಾಧ್ಯವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಮಿಷನ್ ಸಂಜೀವಿನಿ’ ಕಾರ್ಯಕ್ರಮದಡಿ ಸದ್ಯ, ಆರು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ. ವೆಂಟಿಲೇಟರ್ ಸೇರಿದಂತೆ 13,388 ಜೀವರಕ್ಷಕ ಸಾಧನಗಳು, ಇತರೆ ಪರಿಕರಗಳನ್ನು ವಿತರಿಸಲಾಗಿದೆ. 141 ಜಿಲ್ಲಾ ಮಟ್ಟದ ಆಸ್ಪತ್ರೆಗಳು, 171 ಪ್ರಾಥಮಿಕ ಆರೋಗ್ಯ ಘಟಕಗಳು, 167 ಸಮುದಾಯ ಆರೋಗ್ಯ ಕೇಂದ್ರಗಳಿಗೆಈ ಕಾರ್ಯಕ್ರಮದಡಿ ಸೌಲಭ್ಯ ತಲುಪಿಸಲಾಗಿದೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.