ADVERTISEMENT

ಆಮ್ಲಜನಕ ಮಾಸ್ಕ್ ತೆಗೆಯಬಾರದೆಂದು ಹೇಳಿದ ವೈದ್ಯರ ಮೇಲೆ ರೋಗಿಯ ಹಲ್ಲೆ: ದೂರು ದಾಖಲು

ಪಿಟಿಐ
Published 15 ಜುಲೈ 2021, 9:06 IST
Last Updated 15 ಜುಲೈ 2021, 9:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ’ಪದೇ ಪದೇ ಆಮ್ಲಜನಕದ ಮಾಸ್ಕ್‌ ತೆಗೆಯಬೇಡಿ’ ಎಂದು ವೈದ್ಯರು ಹೇಳಿದ್ದಕ್ಕೆ ಸಿಟ್ಟಿಗೆದ್ದ ಕೊರೊನಾ ರೋಗಿಯೊಬ್ಬರು ಆ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಅಲಿಬಾಗ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ನಡೆದಿದೆ.

ಅಲಿಬಾಗ್‌ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 55 ವರ್ಷದ ಕೊರೊನಾ ಸೋಂಕಿತ ರೋಗಿಯೊಬ್ಬರು, ತಮಗೆ ಜೋಡಿಸಿದ್ದ ಆಮ್ಲಜನಕದ ಮಾಸ್ಕ್ ಅನ್ನು ಪದೇ ಪದೇ ತೆಗೆಯುತ್ತಿದ್ದರು. ವೈದ್ಯರು ’ಹಾಗೆ ಪದೇ ಪದೇ ಮಾಸ್ಕ್‌ ತೆಗೆಯಬೇಡಿ’ ಎಂದು ಸಲಹೆ ನೀಡಿದರು. ವೈದ್ಯರ ಸಲಹೆಯನ್ನು ನಿರಾಕರಿಸಿದ ಆ ರೋಗಿ ವೈದ್ಯ ಸ್ವಪ್ನ ದೀಪ್‌ ಥಾಲೆ ಮೇಲೆ ಗ್ಲೋಕೋಸ್‌ ಶೀಶೆ ನೇತು ಹಾಕುವ ಸ್ಟ್ಯಾಂಡ್‌ನಿಂದ ಹಲ್ಲೆ ಮಾಡಿದ್ದಾರೆ.

ಘಟನೆಯಿಂದಾಗಿ ವೈದ್ಯರಿಗೆ ಗಾಯಗಳಾಗಿದ್ದು, ಅವರಿಗೆ ಅದೇ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ವೈದ್ಯರ ಮೇಲೆ ಹಲ್ಲೆ ಮಾಡಿದ ರೋಗಿಯ ವಿರುದ್ಧ ಐಪಿಸಿ ಸೆಕ್ಷನ್ 353 ರ ಅಡಿಯಲ್ಲಿ (ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ) ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.