ADVERTISEMENT

ಕೋವಿಡ್‌ ಪರೀಕ್ಷಾ ಪ್ರಮಾಣ ಏರಿಕೆ: ಈವರೆಗೆ 3.7 ಕೋಟಿ ಜನರಿಗೆ ಪರೀಕ್ಷೆ

ಪ್ರತಿ 10 ಲಕ್ಷಕ್ಕೆ 26,685ರಷ್ಟು ಪರೀಕ್ಷೆ

ಪಿಟಿಐ
Published 25 ಆಗಸ್ಟ್ 2020, 11:46 IST
Last Updated 25 ಆಗಸ್ಟ್ 2020, 11:46 IST
ಹೈದರಾಬಾದ್‌ನಲ್ಲಿ ಕೋವಿಡ್‌–19 ಪರೀಕ್ಷೆಗೆ ಒಳಪಡುತ್ತಿರುವ ಮಹಿಳೆ –ಎಎಫ್‌ಪಿ ಚಿತ್ರ 
ಹೈದರಾಬಾದ್‌ನಲ್ಲಿ ಕೋವಿಡ್‌–19 ಪರೀಕ್ಷೆಗೆ ಒಳಪಡುತ್ತಿರುವ ಮಹಿಳೆ –ಎಎಫ್‌ಪಿ ಚಿತ್ರ    

ನವದೆಹಲಿ: ಭಾರತದಲ್ಲಿ ಇಲ್ಲಿಯವರೆಗೂ 3.7 ಕೋಟಿ ಜನರು ಕೋವಿಡ್‌–19 ಪರೀಕ್ಷೆಗೆ ಒಳಪಟ್ಟಿದ್ದು, ಪರೀಕ್ಷಾ ಪ್ರಮಾಣ ಜನಸಂಖ್ಯೆಯಲ್ಲಿ ಪ್ರತಿ 10 ಲಕ್ಷಕ್ಕೆ 26,685ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ತಿಳಿಸಿದೆ.

ಸೋಂಕು ದೃಢಪಡುತ್ತಿರುವ ಪ್ರಮಾಣ ಶೇ 8.60ಕ್ಕೆ ಇಳಿಕೆಯಾಗಿದ್ದು, ಸೋಂಕು ಮತ್ತಷ್ಟು ವ್ಯಾಪಿಸುವುದನ್ನು ತಡೆಗಟ್ಟಲು ಪರೀಕ್ಷೆ, ಸೋಂಕಿತರ ಸಂಪರ್ಕಿತರ ಪತ್ತೆ ಹಾಗೂ ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತಿದೆ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 24.04 ಲಕ್ಷಕ್ಕೆ ಏರಿಕೆಯಾಗಿದ್ದು, ಗುಣಮುಖ ಪ್ರಮಾಣ ಶೇ 75.92ಕ್ಕೆ ಏರಿದೆ. ಕೋವಿಡ್‌–19ರಿಂದ ಆಗುತ್ತಿರುವ ಮರಣ ಪ್ರಮಾಣ ಶೇ 1.84ಕ್ಕೆ ಇಳಿಕೆಯಾಗಿದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.

ಸೋಮವಾರ ಒಂದೇ ದಿನದಲ್ಲಿ 9,25,383 ಜನರ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು, ಒಟ್ಟು ಪರೀಕ್ಷೆಯ ಸಂಖ್ಯೆ 3,68,27,520 ತಲುಪಿದೆ. ಪ್ರಸ್ತುತ 986 ಸರ್ಕಾರಿ ಪ್ರಯೋಗಾಲಯಗಳು ಹಾಗೂ 538 ಖಾಸಗಿ ಪ್ರಯೋಗಾಲಯಗಳು ಸೇರಿದಂತೆ ಒಟ್ಟು 1,524 ಪ್ರಯೋಗಾಲಯಗಳಿವೆ ಎಂದು ಸಚಿವಾಲಯ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.