ADVERTISEMENT

ಕೋವಿಡ್–19: ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿದ ಭಾರತ

ಏಜೆನ್ಸೀಸ್
Published 29 ಮೇ 2020, 6:21 IST
Last Updated 29 ಮೇ 2020, 6:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ಸೋಂಕಿನಿಂದ ದೇಶದಲ್ಲಿ ಒಂದೇ ದಿನ 175 ಜನ ಮೃತಪಟ್ಟಿದ್ದು, ಈ ಮೂಲಕ ಭಾರತವು ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದೆ. ದೇಶದಲ್ಲಿ ಈವರೆಗೆ 4,706 ಸಾವು ಸಂಭವಿಸಿದೆ.

ಕಳೆದ ಕೆಲವು ದಿನಗಳಿಂದ ಅತಿ ಹೆಚ್ಚು ಪ್ರಕರಣಗಳು ದೃಢಪಡುತ್ತಿದ್ದು, ಭಾರತವು ಹೊಸ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಳ್ಳುತ್ತಿದೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಸೋಂಕಿತರ ಸಂಖ್ಯೆ 165,799ಕ್ಕೆ ಏರಿಕೆಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಶೇ 36ರಷ್ಟು ಸೋಂಕಿತರಿದ್ದು, ಶೇ 42ರಷ್ಟು ಸಾವು ಸಂಭವಿಸಿದೆ.

ಕೊರೊನಾ ವೈರಸ್ ಮೊದಲಿಗೆ ಕಾಣಿಸಿಕೊಂಡಿದ್ದ ಚೀನಾದಲ್ಲಿ ಈವರೆಗೆ ಒಟ್ಟು 82,995 ಜನರಿಗೆ ಸೋಂಕು ತಗುಲಿದ್ದು, 4,634 ಜನ ಮೃತಪಟ್ಟಿದ್ದಾರೆ.‌ ವಿಶ್ವದಾದ್ಯಂತ ಈವರೆಗೆ ಕೊರೊನಾದಿಂದಾಗಿ 357,311 ಜನ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ ಅತಿ ಹೆಚ್ಚು, ಅಂದರೆ 101,002 ಜನ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.