ADVERTISEMENT

ಕೋವಿಡ್ ಲಸಿಕೆ: ದೇಶದಲ್ಲಿ ಕರ್ನಾಟಕವೇ ಪ್ರಥಮ

ದೇಶದಾದ್ಯಂತ ಇಲ್ಲಿವರೆಗೆ 14 ಲಕ್ಷ ಫಲಾನುಭವಿಗಳಿಗೆ ಲಸಿಕೆ

ಪಿಟಿಐ
Published 23 ಜನವರಿ 2021, 8:17 IST
Last Updated 23 ಜನವರಿ 2021, 8:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಇಲ್ಲಿವರೆಗೆ ಸುಮಾರು 14 ಲಕ್ಷ ಮಂದಿಗೆ ‘ಕೋವಿಡ್‌ 19‘ ಲಸಿಕೆ ಹಾಕಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಪ್ರಮುಖ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದೇಶದಾದ್ಯಂತ ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ 3,47,058 ಮಂದಿಗೆ ಲಸಿಕೆ ಹಾಕಲಾಗಿದೆ. ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದಾದ್ಯಂತ ಅತಿ ಹೆಚ್ಚು ಲಸಿಕೆಗಳನ್ನು ಹಾಕಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ (1,84,699) ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ(1.33.298), ಒಡಿಶಾ(1,30,007) ಮತ್ತು ಉತ್ತರ ಪ್ರದೇಶ(1,23,761) ರಾಜ್ಯಗಳಿವೆ.

ತೆಲಂಗಾಣದಲ್ಲಿ 1,10,031 ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ. ಮಹಾರಾಷ್ಟ್ರದಲ್ಲಿ 74,960, ಬಿಹಾರದಲ್ಲಿ 63620, ಹರಿಯಾಣದಲ್ಲಿ 62142, ಕೇರಳದಲ್ಲಿ 47293 ಮತ್ತು ಮಧ್ಯಪ್ರದೇಶದಲ್ಲಿ 38278 ಫಲಾನುಭವಿಗಳು ಲಸಿಕೆ ಹಾಕಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.