ADVERTISEMENT

ಕೋವಿಡ್‌ ಲಸಿಕೆಯಿಂದ ಸೋಂಕಿನ ವಿರುದ್ಧ ಹತ್ತು ತಿಂಗಳು ರಕ್ಷಣೆ

ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಅಭಿಮತ

ಪಿಟಿಐ
Published 20 ಮಾರ್ಚ್ 2021, 10:31 IST
Last Updated 20 ಮಾರ್ಚ್ 2021, 10:31 IST
ಕೋವಿಡ್ ಲಸಿಕೆ ಪಡೆಯುತ್ತಿರುವ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ (ಸಾಂದರ್ಭಿಕ ಚಿತ್ರ)
ಕೋವಿಡ್ ಲಸಿಕೆ ಪಡೆಯುತ್ತಿರುವ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ (ಸಾಂದರ್ಭಿಕ ಚಿತ್ರ)   

ನವದೆಹಲಿ: ‘ಕೋವಿಡ್‌– 19 ಲಸಿಕೆ 8–10 ತಿಂಗಳವರೆಗೆ ಸೋಂಕಿನ ವಿರುದ್ಧ ಉತ್ತಮ ರಕ್ಷಣೆ ಒದಗಿಸಲಿದೆ‘ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್‌) ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.

‘ಇಲ್ಲಿವರೆಗೂ ಲಸಿಕೆಯಿಂದ ಯಾವುದೇ ರೀತಿಯ ಪ್ರಮುಖ ಅಡ್ಡ ಪರಿಣಾಮ ಉಂಟಾಗಿರುವ ವರದಿಗಳು ಬಂದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಐಪಿಎಸ್‌ (ಕೇಂದ್ರ) ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಈ ಲಸಿಕೆ, ಎಂಟು– ಹತ್ತು ತಿಂಗಳಿಗಿಂತ ಹೆಚ್ಚು ಕಾಲ ಸೋಂಕಿನಿಂದ ರಕ್ಷಣೆ ನೀಡುವ ಸಾಧ್ಯತೆಯೂ ಇದೆ‘ ಎಂದರು.

ADVERTISEMENT

‘ಜನರು ಕೋವಿಡ್‌ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಕೋವಿಡ್‌–19 ಸಂಪೂರ್ಣ ನಿರ್ಮೂಲನೆಯಾಗಿದೆ ಎಂದು ಜನರು ಭಾವಿಸಿರುವುದೇಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಪ್ರಮುಖ ಕಾರಣ‘ ಎಂದು ಅಭಿಪ್ರಾಯಪಟ್ಟರು.

ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ.ಕೆ ಪೌಲ್ ಮಾತನಾಡಿ, ‘ಲಸಿಕೆ ಎಂಬುದು ಸೋಂಕು ಹರಡುವುದನ್ನು ತಡೆಯುವ ಒಂದು ಸಾಧನ. ಆದರೆ, ಸೋಂಕು ಪ್ರಸರಣ ಕೊಂಡಿಯನ್ನು ತುಂಡರಿಸುವುದು ಬಹಳ ಮುಖ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.