ADVERTISEMENT

ಪತ್ರಕರ್ತ ವಿನೋದ್‌ ದುವಾ ನಿಧನ

ಪಿಟಿಐ
Published 4 ಡಿಸೆಂಬರ್ 2021, 15:32 IST
Last Updated 4 ಡಿಸೆಂಬರ್ 2021, 15:32 IST
ವಿನೋದ್‌ ದುವಾ
ವಿನೋದ್‌ ದುವಾ   

ನವದೆಹಲಿ: ಕೋವಿಡ್‌ ಬಾಧಿಸಿ ಇಲ್ಲಿನ ಅಪೋಲೊ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ರಕರ್ತ (67) ವಿನೋದ್‌ ದುವಾ ಶನಿವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.

ದೂರದರ್ಶನ ಮತ್ತು ಎನ್‌ಡಿಟಿವಿಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ದುವಾ ಅವರನ್ನು ಕೋವಿಡ್‌ ಬಾಧಿಸಿದ ಕಾರಣ ಈ ವರ್ಷದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪತ್ನಿ ಡಾ.ಪದ್ಮಾವತಿ ಅವರು ಜೂನ್‌ನಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT