ADVERTISEMENT

Covid: ದೇಶದಲ್ಲಿ ಸೋಂಕು ಹೆಚ್ಚಳ; 3,395 ಸಕ್ರಿಯ ಪ್ರಕರಣ; ಕೇರಳದಲ್ಲಿ ಅಧಿಕ

ಪಿಟಿಐ
Published 31 ಮೇ 2025, 14:23 IST
Last Updated 31 ಮೇ 2025, 14:23 IST
<div class="paragraphs"><p>ಕೋವಿಡ್</p></div>

ಕೋವಿಡ್

   

ನವದೆಹಲಿ: ದೇಶದಲ್ಲಿ ಕೋವಿಡ್‌–19 ಸೋಂಕಿನ ಸಂಖ್ಯೆ ಹೆಚ್ಚಳವಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳು ಮೂರು ಸಾವಿರ ದಾಟಿವೆ.

ಕೇರಳದಲ್ಲಿ ದೇಶದಲ್ಲೇ ಅತಿ ಹೆಚ್ಚು (1,336) ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಮತ್ತು ದೆಹಲಿ ರಾಜ್ಯಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹೊರಡಿಸಿದ ಮಾಹಿತಿಯಲ್ಲಿ ಹೇಳಲಾಗಿದೆ.

ADVERTISEMENT

ಕಳೆದ 24 ಗಂಟೆಯಲ್ಲಿ ದೆಹಲಿ, ಕೇರಳ, ಕರ್ನಾಟಕ ಹಾಗೂ ಉತ್ತರ ಪ್ರದೇಶದಲ್ಲಿ ಸೋಂಕಿಗೆ ಈವರೆಗೂ ನಾಲ್ವರು ಮೃತಪಟ್ಟಿದ್ದಾರೆ. ಸೋಂಕು ಹರಡುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸೋಂಕಿನ ತೀವ್ರತೆ ಕಡಿಮೆ ಇದೆ. ಬಹಳಷ್ಟು ಸೋಂಕಿತರು ಮನೆ ಆರೈಕೆಯಲ್ಲಿದ್ದಾರೆ. ಭಯಪಡುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

ಮೇ 22ರಂದು ದೇಶದಲ್ಲಿ 257 ಸಕ್ರಿಯ ಪ್ರಕರಣಗಳಿದ್ದವು. ಈ ಸಂಖ್ಯೆ ಮೇ 26ರ ಹೊತ್ತಿಗೆ 1,010ಕ್ಕೆ ಏರಿತು. ಶನಿವಾರ ಸೋಂಕಿತರ ಸಂಖ್ಯೆ 3,395 ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ 685 ಹೊಸ ಪ್ರಕರಣಗಳು ಪತ್ತೆಯಾಗಿವೆ. ನಾಲ್ವರು ಮೃತಪಟ್ಟಿದ್ದಾರೆ ಎಂದು ದಾಖಲೆ ಹೇಳಿದೆ.

ಕೇರಳದಲ್ಲಿ 1,336 ಸಕ್ರಿಯ ಪ್ರಕರಣಗಳು, ಮಹಾರಾಷ್ಟ್ರದಲ್ಲಿ 467, ದೆಹಲಿಯಲ್ಲಿ 375, ಗುಜರಾತ್‌ನಲ್ಲಿ 265, ಕರ್ನಾಟಕದಲ್ಲಿ 234, ಪಶ್ಚಿಮ ಬಂಗಾಳದಲ್ಲಿ 205, ತಮಿಳುನಾಡಿನಲ್ಲಿ 185 ಮತ್ತು ಉತ್ತರ ಪ್ರದೇಶದಲ್ಲಿ 117 ಸಕ್ರಿಯ ಪ್ರಕರಣಗಳಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ. ರಾಜೀವ್ ಬೆಲ್‌ ಪ್ರತಿಕ್ರಿಯಿಸಿ, ‘ದೇಶದ ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ ಪತ್ತೆಯಾಗಿರುವ ಸೋಂಕಿತರಲ್ಲಿರುವ ವೈರಾಣುವನ್ನು ಪರಿಶೀಲಿಸಿದಾಗ, ಸದ್ಯದ ಸೋಂಕಿತರ ಸಂಖ್ಯೆ ಏರಿಕೆಗೆ ಹೊಸ ತಳಿ ಕಾರಣ ಹಾಗೂ ಒಮಿಕ್ರಾನ್‌ ಎಂಬ ಉಪತಳಿಯು ಅಷ್ಟಾಗಿ ಗಂಭೀರವಾಗಿಲ್ಲ’ ಎಂದು ತಿಳಿಸಿದ್ದಾರೆ.

ಉಪತಳಿಯಾದ ಒಮಿಕ್ರಾನ್‌ ಎಲ್ಎಫ್‌7, ಎಕ್ಸ್‌ಎಫ್‌ಜಿ, ಜೆಎನ್‌.1 ಮತ್ತು ಎನ್‌ಬಿ.1.8.1 ಪತ್ತೆಯಾಗಿವೆ. ಸೋಂಕಿತರಲ್ಲಿ ಹೆಚ್ಚಾಗಿ ಮೊದಲ ಮೂರು ಉಪತಳಿಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.