ADVERTISEMENT

Covid-19 India Update: 1ನೇ ದಿನ ಲಸಿಕೆ ಅಭಿಯಾನ, ಅಡ್ಡಪರಿಣಾಮದ ವರದಿಗಳಿಲ್ಲ

ಏಜೆನ್ಸೀಸ್
Published 16 ಜನವರಿ 2021, 14:58 IST
Last Updated 16 ಜನವರಿ 2021, 14:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೋವಿಡ್‌–19 ಪಿಡುಗಿನ ವಿರುದ್ಧ ಜಗತ್ತಿನ ಅತಿ ದೊಡ್ಡ, ದೇಶವ್ಯಾಪಿ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.

ಶನಿವಾರ ಬೆಳಿಗ್ಗೆ 10.30ಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ ಅವರು, ಕೋವಿಡ್‌ ಅಂತ್ಯ ಆರಂಭವಾಗಿದೆ ಎಂದು ತಿಳಿಸಿದರು.

ದೇಶದ ಒಟ್ಟು 3,006 ಕೇಂದ್ರಗಳಲ್ಲಿ ಮೊದಲ ದಿನ 1.65 ಲಕ್ಷ ಜನರಿಗೆ ( ಸಂಜೆ 5.30ರ ವೇಳೆಗೆ) ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮೊದಲ ಹಂತದಲ್ಲಿ 3 ಕೋಟಿ ಕೊರೊನಾ ವಾರಿಯರ್ಸ್‌ಗಳಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ADVERTISEMENT

ಕೋವಿಶೀಲ್ಡ್‌ ಮತ್ತು ಕೊವಾಕ್ಸಿನ್‌ ಲಸಿಕೆಗಳನ್ನು ನೀಡಲಾಯಿತು. ದೆಹಲಿ ಸೇರಿದಂತೆ 12 ರಾಜ್ಯಗಳಲ್ಲಿ ಕೊವಾಕ್ಸಿನ್‌ ಲಸಿಕೆ ಬಳಕೆ ಮಾಡಲಾಗಿದೆ. ಸೀರಂ ಸಂಸ್ಥೆಯ ಮುಖ್ಯಸ್ಥ ಪೂನಾವಾಲ ಸೇರಿದಂತೆ ಬಿಜೆಪಿಯ ಎಂಪಿ ಶರ್ಮಾ ಹಾಗೂ ಟಿಎಂಸಿ ಶಾಸಕರೊಬ್ಬರು ಕೋವಿಡ್‌ ಲಸಿಕೆ ಪಡೆದರು.

ಲಸಿಕೆ ಹಾಕಿದ ಬಳಿಕ ದೇಶದ ಯಾವುದೇ ಭಾಗದಲ್ಲೂ ಅಡ್ಡಪರಿಣಾಮ ಅಥವಾ ಅಲರ್ಜಿ ಉಂಟಾಗಿರುವ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ ಎಂದು ಕೇಂದ್ರದ ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 15,158 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, 175 ಸೋಂಕಿತರು ಮೃತಪಟ್ಟಿದ್ದಾರೆ.

ಈ ವರೆಗೆ ಒಟ್ಟು 1,05,42,841 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 1,52,093 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ 16,977 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈ ವರೆಗೆ ಒಟ್ಟು 1,01,79,715 ಮಂದಿ ಗುಣಮಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.