ADVERTISEMENT

ಪಿಎಂ ಕೇರ್ಸ್‌ ನಿಧಿಗೆ ₹10 ಕೋಟಿ ನೀಡಿದ 'ಹಾರ್ಮನ್‌'

​ಪ್ರಜಾವಾಣಿ ವಾರ್ತೆ
Published 5 ಮೇ 2021, 9:42 IST
Last Updated 5 ಮೇ 2021, 9:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆ ನಿಯಂತ್ರಿಸಲು ಕೈಗೊಳ್ಳುವ ಕಾರ್ಯಕ್ಕೆ ‘ಪಿಎಂ ಕೇರ್ಸ್‌’ ನಿಧಿಗೆ ₹10 ಕೋಟಿ ದೇಣಿಗೆ ನೀಡುವುದಾಗಿ ಹಾರ್ಮನ್‌ ಕಂಪನಿ ಘೋಷಿಸಿದೆ.

ಕಾರ್ಪೋರೇಟ್‌ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ಅಡಿಯಲ್ಲಿ ಈ ದೇಣಿಗೆ ನೀಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

‘ಕೋವಿಡ್‌–19 ಬಿಕ್ಕಟ್ಟು ನಿಭಾಯಿಸಲು ಸರ್ಕಾರಕ್ಕೆ ನಾವು ನೆರವಾಗುತ್ತಿದ್ದೇವೆ. ಇದಕ್ಕಾಗಿಯೇ ಪಿಎಂ ಕೇರ್ಸ್‌ಗೆ ದೇಣಿಗೆ ನೀಡುತ್ತಿದ್ದೇವೆ’ ಎಂದು ಹಾರ್ಮನ್‌ನ ಭಾರತದ ವ್ಯವಸ್ಥಾಪಕ ಪ್ರತಾಪ್‌ ದೇವನಾಯಘಮ್‌ ತಿಳಿಸಿದ್ದಾರೆ.

ADVERTISEMENT

ಈ ಮೊದಲು, ಭಾರತದಲ್ಲಿನ 8400 ಉದ್ಯೋಗಿಗಳು ಮತ್ತು ಅವರ ಅವಲಂಬಿತರ ಲಸಿಕೆ ವೆಚ್ಚವನ್ನು ಭರಿಸುವುದಾಗಿ ಕಂಪನಿ ತಿಳಿಸಿತ್ತು.

ಕಂಪನಿಯ ಉದ್ಯೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಅಪೊಲೊ ಆಸ್ಪತ್ರೆ ಜತೆ ಹಾರ್ಮನ್‌ ಒಪ್ಪಂದ ಮಾಡಿಕೊಂಡಿದೆ. ವಿಮಾ ವ್ಯಾಪ್ತಿಯನ್ನು ಸಹ ವಿಸ್ತರಿಸಿದ್ದು, ತುರ್ತು ವೈದ್ಯಕೀಯ ಪರಿಸ್ಥಿತಿಗಳಲ್ಲಿ ಹಣಕಾಸಿನ ನೆರವು ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.