ADVERTISEMENT

ಕೋವಿಡ್‌ನಿಂದಾದ ಸಾವುಗಳ ವರದಿಯಲ್ಲಿ ಸತ್ಯಾಂಶವಿಲ್ಲ: ಕೇಂದ್ರ ಸರ್ಕಾರ

ಪಿಟಿಐ
Published 22 ಜುಲೈ 2021, 11:54 IST
Last Updated 22 ಜುಲೈ 2021, 11:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ‘ಕೋವಿಡ್ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬ ಮಾಧ್ಯಮಗಳ ವರದಿಗಳನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರ, ಇಂಥ ವರದಿಗಳಿಗೆ ಯಾವುದೇ ಆಧಾರವಿಲ್ಲ ಮತ್ತು ಅವು ಸುಳ್ಳಿನಿಂದ ಕೂಡಿವೆ‘ ಎಂದು ಪ್ರತಿಪಾದಿಸಿದೆ.

ಮಾಧ್ಯಮಗಳಲ್ಲಿ ಪ್ರಕಟವಾದ ಸಾವಿನ ಪ್ರಮಾಣದ ವರದಿಗಳಲ್ಲಿ ಕೋವಿಡ್‌ನಿಂದಲೇ ಅತಿ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಉಲ್ಲೇಖಿಸಲಾಗಿದೆ. ಇದು ಸತ್ಯ ಸಂಗತಿ ಅಲ್ಲ. ಒಟ್ಟಾರೆಯಾಗಿ ಈ ವರದಿಗಳೆಲ್ಲ ತಪ್ಪು ಮಾಹಿತಿಯಿಂದ ಕೂಡಿವೆ ಎಂದು ಸರ್ಕಾರ ಪ್ರತಿಪಾದಿಸಿದೆ.

ಭಾರತದಲ್ಲಿ ಶಾಸನ ಬದ್ಧವಾದ ಸಾವಿನ ನೋಂದಣಿ ವ್ಯವಸ್ಥೆ ಇದೆ. ಸಾಂಕ್ರಾಮಿಕ ರೋಗ ಮತ್ತು ಅದರ ನಿರ್ವಹಣೆಯ ತತ್ವಗಳ ಪ್ರಕಾರ ಸೋಂಕಿಗೆ ಒಳಗಾಗಿರುವ ಕುರಿತು ಕೆಲವು ಪ್ರಕರಣಗಳು ಪತ್ತೆಯಾಗದಿರುವ ಸಾಧ್ಯತೆ ಇದೆ. ಹಾಗೆಯೇ ಸಾವು ಸಂಭವಿಸಿರುವುದು ಪತ್ತೆಯಾಗದಿರಲೂ ಸಾಧ್ಯವಿದೆ‘ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ADVERTISEMENT

ಕೆಲವು ಮಾಧ್ಯಮಗಳು ‘ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ದಶಲಕ್ಷ ಸಂಖ್ಯೆಯಲ್ಲಿ ಸಾವುಗಳು ಸಂಭವಿಸಿರುವ ಸಾಧ್ಯತೆ ಇದೆ. ಆದರೆ ಸರ್ಕಾರ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸುತ್ತಿದೆ‘ ಎಂದು ವರದಿ ಮಾಡಿದ್ದವು.

ಈ ವರದಿಗಳಲ್ಲಿ ಸೆರೊ–ಪಾಸಿಟಿವಿಟಿ ಆಧಾರದ ಮೇಲೆ, ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ವಯೋಮಾನ ಮತ್ತು ಸೋಂಕಿನಿಂದ ಸಂಭವಿಸಿದ ಸಾವುಗಳ ಪ್ರಮಾಣದ ಮಾಹಿತಿ ಬಳಸಿಕೊಂಡು ಭಾರತದಲ್ಲಿ ಸಂಭವಿಸಿರುವ ಹೆಚ್ಚುವರಿ ಸಾವುಗಳನ್ನು ಲೆಕ್ಕಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.