ADVERTISEMENT

ಯುಜಿಸಿ–ನೆಟ್‌ ಮುಂದೂಡಿಕೆ: ಸೆ.24ರಿಂದ ಆರಂಭ

ಪಿಟಿಐ
Published 14 ಸೆಪ್ಟೆಂಬರ್ 2020, 14:08 IST
Last Updated 14 ಸೆಪ್ಟೆಂಬರ್ 2020, 14:08 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್‌) ಪರೀಕ್ಷೆಯ ದಿನಾಂಕಗಳಂದೇ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (ನೆಟ್‌) ದಿನಾಂಕ ನಿಗದಿಯಾಗಿರುವುದರಿಂದ, ನೆಟ್‌ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮುಂದೂಡಿದೆ.

ಈ ಹಿಂದೆ ಸೆ.16ರಿಂದ 25ರವರೆಗೆ ನೆಟ್‌ ನಿಗದಿಯಾಗಿತ್ತು. ಇದೀಗ ಈ ಪರೀಕ್ಷೆಯನ್ನು ಸೆ.24ರಿಂದ ಆರಂಭಿಸಲು ಎನ್‌ಟಿಎ ನಿರ್ಧರಿಸಿದೆ. ‘ಐಸಿಎಆರ್‌ ಪರೀಕ್ಷೆಗಳನ್ನು ಸೆ16ರಿಂದ 23ರವರೆಗೆ ಎನ್‌ಟಿಎ ನಡೆಸಲಿದೆ. ಈ ಕಾರಣದಿಂದಾಗಿ ಸೆ.24ರಿಂದ ಯುಜಿಸಿ–ನೆಟ್‌ 2020ರ ಪರೀಕ್ಷೆಗಳು ಆರಂಭವಾಗಲಿವೆ’ ಎಂದು ಎನ್‌ಟಿಎ ಹಿರಿಯ ನಿರ್ದೇಶಕಿ ಸಾಧನಾ ಪರಶಾರ್‌ ಹೇಳಿದರು.

ಶೀಘ್ರದಲ್ಲೇ ವಿಷಯವಾರು ದಿನಾಂಕ, ಅವಧಿಯನ್ನು ಎನ್‌ಟಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದರು.ಜೂನ್‌ನಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನುಲಾಕ್‌ಡೌನ್ ಕಾರಣದಿಂದಾಗಿ ಎನ್‌ಟಿಎ ಮುಂದೂಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.