ADVERTISEMENT

ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದ ತೆಲಂಗಾಣದ ಅಂಗನವಾಡಿ ಶಿಕ್ಷಕಿ ಸಾವು

ಪಿಟಿಐ
Published 25 ಜನವರಿ 2021, 1:28 IST
Last Updated 25 ಜನವರಿ 2021, 1:28 IST
ಪ್ರಾತಿನಿಧಿಕ: ರಾಯಿಟರ್ಸ್ ಚಿತ್ರ
ಪ್ರಾತಿನಿಧಿಕ: ರಾಯಿಟರ್ಸ್ ಚಿತ್ರ   

ಹೈದರಾಬಾದ್: ವಾರದ ಹಿಂದೆ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದ ತೆಲಂಗಾಣದ ವಾರಂಗಲ್ ಜಿಲ್ಲೆಯ 45 ವರ್ಷದ ಅಂಗನವಾಡಿ ಶಿಕ್ಷಕಿ ಎದೆನೋವಿನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವಾರಂಗಲ್‌ನ ಶ್ಯಾಮ್‌ ಪೇಟೆಯ ಶಿಕ್ಷಕಿ ಜನವರಿ 19ರಂದು ಲಸಿಕೆ ಹಾಕಿಸಿಕೊಂಡಿದ್ದು, ಶನಿವಾರ ಕೆಲವು ಔಷಧಿಗಳನ್ನು ಪಡೆದಿದ್ದಾರೆ. ಬಳಿಕ ಎದೆನೋವು ಕಾಣಿಸಿಕೊಂಡಿದ್ದರಿಂದ ಮಲಗಿದ್ದಾರೆ. ಆದರೆ, ಭಾನುವಾರ ಬೆಳಗ್ಗೆ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಶಿಕ್ಷಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಹಾತ್ಮಾ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿನ ಕಾರಣ ಪತ್ತೆಗೆ ಪ್ರಯೋಗಾಲಯ ಮಾದರಿ ಸಂಗ್ರಹಿಸಲಾಗಿದೆ ಎಂದು ಆಸ್ಪತ್ರೆ ಮುಖ್ಯಸ್ಥ ನಾಗಾರ್ಜುನ ರೆಡ್ಡಿ ಹೇಳಿದ್ದಾರೆ.

ADVERTISEMENT

ತೆಲಂಗಾಣ ರಾಜ್ಯದಲ್ಲಿ ಕೋವಿಡ್ ಲಸಿಕೆ ಪಡೆದು ಎದೆನೋವು ಕಾಣಿಸಿಕೊಂಡು ಮೃತಪಟ್ಟ ಎರಡನೇ ಮಹಿಳೆಯಾಗಿದ್ದು, ನಿರ್ಮಲ್ ಜಿಲ್ಲೆಯ 42 ವರ್ಷದ ಆರೋಗ್ಯ ಕಾರ್ಯಕರ್ತರೊಬ್ಬರು ಲಸಿಕೆ ಪಡೆದ ಬಳಿಕ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದರು. ಆದರೆ, ಪ್ರಾಥಮಿಕ ಪರೀಕ್ಷೆಯಲ್ಲಿ ಸಾವಿಗೂ ಲಸಿಕೆಗೂ ಸಂಬಂಧವಿಲ್ಲ ಎಂದು ತಿಳಿದುಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.