ADVERTISEMENT

ಕೋವಿಡ್–19: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿವಾಸ ಇರುವ ಕಟ್ಟಡ ಸೀಲ್‌ಡೌನ್

ಏಜೆನ್ಸೀಸ್
Published 30 ಆಗಸ್ಟ್ 2020, 12:26 IST
Last Updated 30 ಆಗಸ್ಟ್ 2020, 12:26 IST
ಲತಾ ಮಂಗೇಶ್ಕರ್ (ಸಂಗ್ರಹ ಚಿತ್ರ)
ಲತಾ ಮಂಗೇಶ್ಕರ್ (ಸಂಗ್ರಹ ಚಿತ್ರ)   
""

ಮುಂಬೈ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿವಾಸ ಇರುವ ‘ಪ್ರಭು ಕುಂಜ್’ ಕಟ್ಟಡವನ್ನು ಕೊರೊನಾ ವೈರಸ್ ಸೋಂಕು ಪತ್ತೆಯಾದ ಕಾರಣ ಬಿಎಂಸಿ (ಬ್ರುಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್) ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ. ಲತಾ ಮಂಗೇಶ್ಕರ್ ಹಾಗೂ ಅವರ ಕುಟುಂಬದವರು ಸುರಕ್ಷಿತವಾಗಿದ್ದಾರೆ.

‘ಪ್ರಭು ಕುಂಜ್‌ನಲ್ಲಿ 11 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಜನರ ಸುರಕ್ಷತೆಯ ದೃಷ್ಟಿಯಿಂದ ಸೀಲ್‌ ಮಾಡಲಾಗಿದೆ’ ಎಂದು ಬಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಭು ಕುಂಜ್‌ನಲ್ಲಿ ಇರುವ ಅನೇಕ ನಿವಾಸಿಗಳು ವಯಸ್ಸಾದವರು. ಹೀಗಾಗಿ ಅವರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.

ಲತಾ ಮಂಗೇಶ್ಕರ್ ಅವರು ಸಂಪೂರ್ಣ ಸುರಕ್ಷಿತರಾಗಿದ್ದಾರೆ. 11 ಮಂದಿ ಸೋಂಕಿತರ ಸಂಪರ್ಕಕ್ಕೆ ಬಂದಿರಲಿಲ್ಲ ಎಂಬುದನ್ನೂ ಅಧಿಕಾರಿ ದೃಢಪಡಿಸಿದ್ದಾರೆ.

ADVERTISEMENT

ಅನೇಕ ಮಂದಿ ಹಿರಿಯ ನಾಗರಿಕರು ಇರುವ ಕಾರಣ ‘ಪ್ರಭು ಕುಂಜ್‌’ ಅನ್ನು ಸೀಲ್ ಮಾಡಲಾಗಿದೆ. ನಾವು ಈ ಮುನ್ನೆಚ್ಚರಿಕೆ ವಹಿಸಬೇಕಾಗಿರುವುದು ಅಗತ್ಯವೂ ಆಗಿದೆ ಎಂದು ಲತಾ ಮಂಗೇಶ್ಕರ್ ಅವರ ಕುಟುಂಬವೂ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಭು ಕುಂಜ್‌ – ಎಎನ್‌ಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.