ADVERTISEMENT

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಮುಂಬೈ

ಏಜೆನ್ಸೀಸ್
Published 7 ಜುಲೈ 2020, 11:51 IST
Last Updated 7 ಜುಲೈ 2020, 11:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ:ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮುಂಬೈ ಇದೀಗ ಚೀನಾವನ್ನೂ ಮೀರಿಸಿದೆ. ನಗರದಲ್ಲಿ ಸೋಮವಾರ ಸಂಜೆ ವೇಳೆಗೆ 85,724 ಮಂದಿ ಸೋಂಕಿತರಾಗಿದ್ದಾರೆ.

2019ರ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ ನಗರದಲ್ಲಿ ಮೊದಲು ಕಾಣಿಸಿಕೊಂಡಿದ್ದ ಕೊರೊನಾ ವೈರಸ್ ಇದೀಗ ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಮುಂಬೈ ಮೆಟ್ರೊಪಾಲಿಟನ್ ರೀಜನ್‌ (ಎಂಎಂಆರ್‌) ಪ್ರದೇಶದಲ್ಲಿ ಈವರೆಗೆ 1.5 ಲಕ್ಷ ಜನರು ಸೋಂಕಿತರಾಗಿದ್ದಾರೆ.

ವಾಣಿಜ್ಯ ನಗರಿ ಮುಂಬೈ, ಮುಂಬೈ ಉಪನಗರ, ಥಾಣೆ, ಪಾಲ್ಫರ್ ಮತ್ತು ರಾಯ್‌ಗಡ ಜಿಲ್ಲೆಗಳಲ್ಲಿ ಅತಿಹೆಚ್ಚು ಮಂದಿಗೆ ಸೋಂಕು ತಗುಲಿದೆ. ಮಾರ್ಚ್‌ 11ರಂದು ಮುಂಬೈನಲ್ಲಿ ಮೊದಲ ಕೋವಿಡ್–19 ಪ್ರಕರಣ ಪತ್ತೆಯಾಗಿತ್ತು. ಇದಾದ 2 ದಿನಗಳ ಬಳಿಕ ಪುಣೆಯಲ್ಲಿ ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ADVERTISEMENT

ಸೋಮವಾರ ಸಂಜೆ ವೇಳೆಗೆ ಮುಂಬೈನಲ್ಲಿ ಸೋಂಕಿತರ ಸಂಖ್ಯೆ 85,724 ಆಗಿದ್ದು, 4,938 ಮಂದಿ ಮೃತಪಟ್ಟಿದ್ದಾರೆ. ಚೀನಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 83,565 ಆಗಿದ್ದು, 4,634 ಸಾವು ಸಂಭವಿಸಿದೆ.

ಎಂಎಂಆರ್‌ ಪ್ರದೇಶದಲ್ಲಿ 1,49,138 ಮಂದಿಗೆ ಸೋಂಕು ತಗುಲಿದ್ದು, 6,515 ಮಂದಿ ಮೃತಪಟ್ಟಿದ್ದಾರೆ.

ಒಟ್ಟಾರೆಯಾಗಿ ದೇಶದಾದ್ಯಂತ ಮಂಗಳವಾರ ಬೆಳಿಗ್ಗೆ ವೇಳೆಗೆಸೋಂಕಿತರಸಂಖ್ಯೆ 7 ಲಕ್ಷ ದಾಟಿದೆ.ಒಟ್ಟು7,19,665 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ4,39,947 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.20,160 ಮಂದಿ ಮೃತಪಟ್ಟಿದ್ದು, ಇನ್ನೂ 2,59,557 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ ಎಂದುಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.