ADVERTISEMENT

Covid-19 India Update: 24 ಗಂಟೆಗಳಲ್ಲಿ 3.79 ಲಕ್ಷಕ್ಕೂ ಅಧಿಕ ಪ್ರಕರಣಗಳು

ಪಿಟಿಐ
Published 29 ಏಪ್ರಿಲ್ 2021, 6:12 IST
Last Updated 29 ಏಪ್ರಿಲ್ 2021, 6:12 IST
ಅಹಮದಾಬಾದ್‌ನಲ್ಲಿ ಕೋವಿಡ್‌–19 ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಮುನ್ನ ಟೆಂಪೊದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡುತ್ತಿರುವುದು.
ಅಹಮದಾಬಾದ್‌ನಲ್ಲಿ ಕೋವಿಡ್‌–19 ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಮುನ್ನ ಟೆಂಪೊದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡುತ್ತಿರುವುದು.   

ನವದೆಹಲಿ: ಭಾರತದಲ್ಲಿ ಗುರುವಾರ 24 ಗಂಟೆಗಳ ಅಂತರದಲ್ಲಿ ಕೋವಿಡ್‌ ದೃಢಪಟ್ಟ 3,79,257 ಹೊಸ ಪ್ರಕರಣಗಳು ದಾಖಲಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 1,83,76,524ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 30 ಲಕ್ಷ ದಾಟಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಿಂದ ತಿಳಿದು ಬಂದಿದೆ.

ಬೆಳಿಗ್ಗೆ 8ರವರೆಗೂ ಒಂದು ದಿನದಲ್ಲಿ ಸೋಂಕಿನಿಂದ 3,645 ಮಂದಿ ಮೃತಪಟ್ಟಿದ್ದು, ಕೋವಿಡ್‌ನಿಂದ ಈವರೆಗೂ 2,04,832 ಮಂದಿ ಸಾವಿಗೀಡಾಗಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 30,84,814 ಆಗಿದ್ದು, ಒಟ್ಟು ಪ್ರಕರಣಗಳ ಪೈಕಿ ಶೇ 16.79ರಷ್ಟಿದೆ. ದೇಶದಲ್ಲಿ ಸೋಂಕಿನಿಂದ ಗುಣಮುಖರಾಗುವ ಪ್ರಮಾಣ ಶೇ 82.10ಕ್ಕೆ ಇಳಿಕೆಯಾಗಿದೆ. 1.50 ಕೋಟಿಗೂ ಹೆಚ್ಚು ಜನರು ಗುಣಮುಖರಾಗಿದ್ದಾರೆ ಹಾಗೂ ಸಾವಿನ ಸಂಖ್ಯೆ ಶೇ 1.11ರಷ್ಟಿದೆ.

ADVERTISEMENT

ಐಸಿಎಂಆರ್‌ ಪ್ರಕಾರ, ಏಪ್ರಿಲ್‌ 28ರವರೆಗೂ 28,44,71,979 ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಬುಧವಾರ 17,68,190 ಕೋವಿಡ್‌ ಪರೀಕ್ಷೆಗಳನ್ನು ಮಾಡಲಾಗಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 2020ರ ಸೆಪ್ಟೆಂಬರ್‌ 16ರಂದು 50 ಲಕ್ಷ ದಾಟಿತು. ಡಿಸೆಂಬರ್‌ 19ರಂದು ಪ್ರಕರಣಗಳು 1 ಕೋಟಿ ಮುಟ್ಟಿತು. 2021ರ ಏಪ್ರಿಲ್‌ 19ರಂದು ಪ್ರಕರಣಗಳ ಸಂಖ್ಯೆ 1.50 ಕೋಟಿ ದಾಟಿತು.

ಗುರುವಾರ ಮಹಾರಾಷ್ಟ್ರದಲ್ಲಿ 1,035 ಜನ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ 368, ಛತ್ತೀಸ್‌ಗಢದಲ್ಲಿ 279, ಉತ್ತರ ಪ್ರದೇಶದಲ್ಲಿ 265 ಹಾಗೂ ಕರ್ನಾಟಕದಲ್ಲಿ 229 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.