ADVERTISEMENT

ಕೋವಿಡ್‌ನಿಂದ ಪಾರಾಗಲು ಚಿನ್ನದ ಮಾಸ್ಕ್ ಧರಿಸಿದ ಪುಣೆಯ ನಿವಾಸಿ

ಏಜೆನ್ಸೀಸ್
Published 4 ಜುಲೈ 2020, 7:52 IST
Last Updated 4 ಜುಲೈ 2020, 7:52 IST
ಚಿನ್ನದ ಮಾಸ್ಕ್‌ ಧರಿಸಿರುವ ಮಹಾರಾಷ್ಟ್ರದ ಶಂಕರ್ ಕುರಾಡೆ
ಚಿನ್ನದ ಮಾಸ್ಕ್‌ ಧರಿಸಿರುವ ಮಹಾರಾಷ್ಟ್ರದ ಶಂಕರ್ ಕುರಾಡೆ    

ಪುಣೆ:ಮಹಾರಾಷ್ಟ್ರದ ಶಂಕರ್ ಕುರಾಡೆ ಎಂಬುವವರು ₹ 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ಧರಿಸುವ ಮೂಲಕ ಜನರ ಆಕರ್ಷಣೆಗೆ ಕಾರಣವಾಗಿದ್ದಾರೆ.

ಪುಣೆ ಜಿಲ್ಲೆಯ ಪಿಂಪರಿ-ಚಿಂಚವಾಡ ನಿವಾಸಿಯಾಗಿರುವ ಶಂಕರ್‌ ಕುರಾಡೆ ಅವರು ವ್ಯಾಪಾರಿಯಾಗಿದ್ದು, ಚಿನ್ನದ ಆಭರಣಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ. ಆ ಹಿನ್ನೆಲೆಯಲ್ಲಿ ಚಿನ್ನದಿಂದ ಮಾಸ್ಕ್‌ ತಯಾರಿಸಿ, ಧರಿಸಿರುವುದಾಗಿ ಅವರು ಹೇಳಿದ್ದಾರೆ.

ADVERTISEMENT

'ತೆಳು ಪದರದಿಂದ ಕೂಡಿರುವ ಈ ಮಾಸ್ಕ್‌ ಐದು ರಂಧ್ರಗಳನ್ನು ಹೊಂದಿದೆ. ಆದ್ದರಿಂದ, ಉಸಿರಾಟಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲ. ಈ ಚಿನ್ನದ ಮಾಸ್ಕ್‌ ಪರಿಣಾಮಕಾರಿಯೇ ಎಂಬುದು ನನಗೆ ಖಚಿತವಾಗಿ ತಿಳಿದಿಲ್ಲ' ಎಂದು ಅವರು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.