ADVERTISEMENT

ಕೊರೊನಾ ಶಂಕಿತ ರೋಗಿಗಳು ಆಸ್ಪತ್ರೆಯಿಂದಲೇ ಪರಾರಿ: ಪೊಲೀಸರಿಗೆ ದೂರು

ಏಜೆನ್ಸೀಸ್
Published 14 ಮಾರ್ಚ್ 2020, 6:43 IST
Last Updated 14 ಮಾರ್ಚ್ 2020, 6:43 IST
ನಾಗಪುರದಲ್ಲಿರುವ ಮೆಯೋ ಆಸ್ಪತ್ರೆ
ನಾಗಪುರದಲ್ಲಿರುವ ಮೆಯೋ ಆಸ್ಪತ್ರೆ   
""

ನಾಗಪುರ (ಮಹಾರಾಷ್ಟ್ರ): ಕೊರೊನಾ ವೈರಸ್ ಸೋಂಕು ಭೀತಿಯಿಂದ ತಾವು ದಾಖಲಾಗಿದ್ದ ಆಸ್ಪತ್ರೆಯಿಂದಲೇ ನಾಲ್ಕು ಮಂದಿ ರೋಗಿಗಳು ಪರಾರಿಯಾಗಿರುವ ಘಟನೆ ನಡೆದಿದೆ.

ಜ್ವರ ಶೀತದಿಂದ ದಾಖಲಾಗಿದ್ದ ಐದು ಮಂದಿ ಶಂಕಿತ ಕೊರೊನಾ ಸೋಂಕಿತ ರೋಗಿಗಳು ಇಲ್ಲಿನ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಮೆಯೋ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಐದು ಮಂದಿ ತೀವ್ರ ಜ್ವರ, ಕೆಮ್ಮು ಬಂದ ಕಾರಣ ಚಿಕಿತ್ಸೆಗೆ ದಾಖಲಾಗಿದ್ದರು. ಕೂಡಲೆ ವೈದ್ಯರು ಎಲ್ಲರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಅವರಲ್ಲಿ ಒಬ್ಬನ ರಕ್ತಪರೀಕ್ಷೆಯ ವರದಿ ಬಂದಿದ್ದು, ನೆಗೆಟಿವ್ ಎಂದು ತಿಳಿದುಬಂದಿದೆ.

ADVERTISEMENT

ಆದರೆ, ಉಳಿದ ನಾಲ್ಕು ಮಂದಿಯ ರಕ್ತದ ಮಾದರಿಗಳನ್ನೂ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಈ ಮಧ್ಯೆಕೊರೊನಾ ಸೋಂಕಿನಿಂದ ಭಯಭೀತರಾದ ನಾಲ್ಕು ಮಂದಿಯೂ ಆಸ್ಪತ್ರೆಯಿಂದ ಪರಾರಿಯಾಗಿದ್ದರು.

ಸ್ಥಳೀಯ ಪೊಲೀಸ್ ಅಧಿಕಾರಿ ಎಸ್.ಸೂರ್ಯವಂಶಿ

ವಿಷಯ ತಿಳಿದ ಆಸ್ಪತ್ರೆಯ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ರೋಗಿಗಳನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿದ್ದರು.

ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ಕು ಮಂದಿಯನ್ನು ಪತ್ತೆಹಚ್ಚಿದ್ದಾರೆ.ಐದು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಎಲ್ಲಾರೋಗಿಗಳರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಅವರಲ್ಲಿ ಒಬ್ಬನಫಲಿತಾಂಶ ಬಂದಿದ್ದು, ನೆಗೆಟಿವ್ ಎಂದು ವರದಿಯಾಗಿದೆ. ಉಳಿದ ನಾಲ್ಕು ಮಂದಿಯ ರಕ್ತದ ಮಾದರಿಯ ವರದಿ ಇನ್ನೂ ಬಂದಿಲ್ಲ.

ಅಷ್ಟರಲ್ಲಿ ಅವರು ಆಸ್ಪತ್ರೆಯಿಂದಲೇ ಪರಾರಿಯಾಗಿದ್ದರು. ಒಬ್ಬೊಬ್ಬರು ಒಂದೊಂದು ಕಡೆ ತಲೆಮರೆಸಿಕೊಂಡಿದ್ದರು. ನಮ್ಮ ತಂಡ ಶಂಕಿತರು ಇರುವ ಸ್ಥಳವನ್ನುಪತ್ತೆ ಹಚ್ಚಲಾಗಿದೆ. ಕೂಡಲೆ ಅವರನ್ನು ಆಸ್ಪತ್ರೆಯ ಆಡಳಿತ ಮಂಡಲಿಗೆ ಒಪ್ಪಿಸಲಾಗುವುದು ಎಂದು ಸಬ್ ಇನ್ಸ್‌‌ಪೆಕ್ಟರ್ ಎಸ್ .ಸೂರ್ಯವಂಶಿ ಎಎನ್‌ಐಗೆತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.