ADVERTISEMENT

ನಿಜಾಮುದ್ದೀನ್ ಮರ್ಕಜ್:ಕೊರೊನಾ ಸೋಂಕಿತ ವ್ಯಕ್ತಿ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಯತ್ನ

ಏಜೆನ್ಸೀಸ್
Published 2 ಏಪ್ರಿಲ್ 2020, 7:40 IST
Last Updated 2 ಏಪ್ರಿಲ್ 2020, 7:40 IST
ಆತ್ಮಹತ್ಯೆ ಪ್ರಯತ್ನ– ಸಾಂಕೇತಿಕ ಚಿತ್ರ
ಆತ್ಮಹತ್ಯೆ ಪ್ರಯತ್ನ– ಸಾಂಕೇತಿಕ ಚಿತ್ರ   

ನವದೆಹಲಿ: ನಿಜಾಮುದ್ದೀನ್‌ನ ಮರ್ಕಜ್‌ನಿಂದ ಆಸ್ಪತ್ರೆಗೆ ಕರೆ ತರಲಾಗಿರುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರೊಂದಿಗೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿರುವ ರಾಜೀವ್‌ ಗಾಂಧಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯ, 'ಮರ್ಕಜ್‌ನಿಂದ ಕರೆ ತರಲಾಗಿರುವ ಕರೊನಾ ಸೋಂಕಿತರು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಹಕರಿಸುತ್ತಿಲ್ಲ' ಎಂದು ತಿಳಿಸಿದ್ದಾರೆ.

'ಮರ್ಕಜ್‌ನಿಂದ ಬಂದಿರುವ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ. ಆದರೆ, ವೈದ್ಯರು ಅವರ ಪ್ರಾಣ ಪಣಕ್ಕಿಟ್ಟುಆತನ ಪ್ರಯತ್ನವನ್ನು ತಪ್ಪಿಸಿದ್ದಾರೆ' ಎಂದಿದ್ದಾರೆ.

ADVERTISEMENT

ನಿಜಾಮುದ್ದೀನ್‌ ಪ್ರದೇಶದಲ್ಲಿ ಕಳೆದ ತಿಂಗಳು ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ 53 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಬುಧವಾರದ ವರೆಗೂ ದೆಹಲಿಯಲ್ಲಿ ಒಟ್ಟು 152 ಪ್ರಕರಣಗಳು ದಾಖಲಾಗಿವೆ.

ಆಸ್ಪತ್ರೆಭದ್ರತೆಗೆ ಸಂಬಂಧಿಸಿದ ವಿಚಾರವನ್ನೂ ಪ್ರಸ್ತಾಪಿಸಲಾಗಿದ್ದು, ಗೃಹ ಕಾರ್ಯದರ್ಶಿಗಳ ಜೊತೆ ವೈದ್ಯರು ಹಾಗೂ ರೋಗಿಗಳಿಗೆ ಭದ್ರತೆ ಹೆಚ್ಚಿಸುವ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಕೆಲವು ರೋಗಿಗಳು ಆಕ್ರಮಣಕಾರಿಗಳಾಗಿ ವರ್ತಿಸುತ್ತಿದ್ದು, ಅದರಿಂದಾಗಿ ಯಾರೂ ಸಹ ಅವರ ಸಮೀಪ ಹೋಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯನ್ನು ವೈದ್ಯರು ಎಳೆದು ಪ್ರಾಣ ಉಳಿಸಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.