ADVERTISEMENT

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶಿಲ್ಡ್‌, ಕೋವ್ಯಾಕ್ಸಿನ್‌ ಲಸಿಕೆ ₹ 225ಕ್ಕೆ ಲಭ್ಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 11:54 IST
Last Updated 9 ಏಪ್ರಿಲ್ 2022, 11:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ದೇಶದಲ್ಲಿ ಕೋವಿಶಿಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆ ದರ ಇಳಿಕೆಯಾಗಿದ್ದು, ನಾಳೆಯಿಂದ (ಏ.10) ಹೊಸ ದರದಲ್ಲಿ ಲಸಿಕೆ ಲಭ್ಯವಾಗಲಿದೆ.

ಖಾಸಗಿ ಕೇಂದ್ರಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟವರು, ಬೂಸ್ಟರ್‌ ಹಾಗೂ ಮುನ್ನೆಚ್ಚರಿಕೆ ಡೋಸ್‌ ಪಡೆಯುವವರು ಇನ್ನು ಮುಂದೆ ಪ್ರತಿ ಡೋಸ್‌ ಕೋವಿಶಿಲ್ಡ್‌ ಲಸಿಕೆಯನ್ನು ₹ 225ಕ್ಕೆ ಪಡೆಯಬಹುದಾಗಿದೆ. ಹಾಗೇ ಕೋವ್ಯಾಕ್ಸಿನ್‌ ಲಸಿಕೆಯನ್ನು ಕೂಡ ₹ 225ಕ್ಕೆ ಪಡೆಯಬಹುದು. ಖಾಸಗಿ ಲಸಿಕಾ ಕೇಂದ್ರ ಅಥವಾ ಆಸ್ಪತ್ರೆಗಳ ಸೇವಾ ಶುಲ್ಕ ₹150ನ್ನು ಪ್ರತ್ಯೇಕವಾಗಿ ಪಾವತಿಸಬೇಕು.

ದರ ಪರಿಷ್ಕರಣೆಯಿಂದ ಕೋವಿಶೀಲ್ಡ್‌ಲಸಿಕೆ ₹ 225ಕ್ಕೆ ಲಭ್ಯವಾಗಲಿದೆ. ಈ ಮೊದಲುಲಸಿಕೆ ₹ 600ಕ್ಕೆ ದೊರೆಯುತ್ತಿತ್ತು. ಅದೇ ರೀತಿ ಕೋವ್ಯಾಕ್ಸಿನ್‌ ಲಸಿಕೆ ಕೂಡ ₹225ಕ್ಕೆ ದೊರೆಯಲಿದೆ. ಇದು ಈ ಮೊದಲು ₹1200ಕ್ಕೆ ಲಭ್ಯವಾಗುತ್ತಿತ್ತು. ಈ ದರ ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಲಸಿಕಾ ಕೇಂದ್ರಗಳಿಗೆ ಮಾತ್ರ ಅನ್ವಯವಾಗಲಿದೆ. ಸರ್ಕಾರಿ ಆಸ್ಪತ್ರೆ ಹಾಗೂ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ಲಭ್ಯವಾಗಲಿದೆ.

ADVERTISEMENT

ಕೋವಿಶೀಲ್ಡ್‌ ಲಸಿಕೆ ತಯಾರಿಸುವ ಸೆರಂ ಕಂಪನಿಯ ಪೂನಾವಾಲ ಹಾಗೂ ಕೋವ್ಯಾಕ್ಸಿನ್‌ ಲಸಿಕೆ ಉತ್ಪಾದಿಸುವ ಭಾರತ್‌ ಬಯೋಟೆಕ್‌ ಕಂಪನಿಯ ಸುಚಿತ್ರಾ ಅವರು ಟ್ವೀಟ್‌ ಮಾಡಿ ಹೊಸ ದರದ ಬಗ್ಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಜೊತೆ ಹಲವು ಸುತ್ತುಗಳ ಮಾತಕತೆ ನಡೆಸಿದ ಬಳಿಕ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ನಾಳೆಯಿಂದ 18 ವರ್ಷ ಮೇಲ್ಪಟ್ಟವರು, ಬೂಸ್ಟರ್‌ ಡೋಸ್‌ ಪಡೆಯುವವರು ಖಾಸಗಿ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಹೊಸ ದರದಲ್ಲಿ ಲಸಿಕೆ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.