ಮುಂಬೈ: ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ಕೊವೊವ್ಯಾಕ್ಸ್ ಕೋವಿಡ್ ಲಸಿಕೆಯ ಪ್ರಯೋಗವನ್ನು ಮಕ್ಕಳ ಮೇಲೆ ಈ ತಿಂಗಳು ಆರಂಭಿಸಲಿದೆ ಎಂದು ವರದಿಯಾಗಿದೆ.
2ರಿಂದ 17 ವರ್ಷ ವಯಸ್ಸಿನ 920 ಮಕ್ಕಳ ಮೇಲೆ ಪ್ರಯೋಗ ನಡೆಸಲಿದೆ. ಎರಡು ಗುಂಪುಗಳಾಗಿ ವಿಭಜಿಸಿ 10 ಕಡೆಗಳಲ್ಲಿ ಪ್ರಯೋಗ ನಡೆಸಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಬ್ಯುಸಿನೆಸ್ ಸ್ಟಾಂಡರ್ಡ್’ ವರದಿ ಮಾಡಿದೆ.
ಪ್ರಯೋಗಕ್ಕಾಗಿ 2ರಿಂದ 11 ವರ್ಷ ಮತ್ತು 12ರಿಂದ 17 ವರ್ಷದ ಗುಂಪುಗಳನ್ನು ಮಾಡಲಾಗಿದೆ.
2ರಿಂದ 17 ವರ್ಷ ವಯಸ್ಸಿನವರ ಮೇಲೆ ಕೊವೊವ್ಯಾಕ್ಸ್‌ನ ಪ್ರಯೋಗ ನಡೆಸಲು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಅನುಮತಿ ನೀಡಲು ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ತಂಡ ಜುಲೈ 27ರಂದು ಶಿಫಾರಸು ಮಾಡಿತ್ತು.
ಮಕ್ಕಳಿಗೂ ಕೋವಿಡ್ ಲಸಿಕೆ ನೀಡಿಕೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಇತ್ತೀಚೆಗೆ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.