ADVERTISEMENT

ಸಿಆರ್‌ಪಿಎಫ್‌ ಯೋಧರ ಸಾಹಸ ಕುರಿತ ಕೃತಿ ಬಿಡುಗಡೆ

ಪಿಟಿಐ
Published 13 ಡಿಸೆಂಬರ್ 2020, 13:39 IST
Last Updated 13 ಡಿಸೆಂಬರ್ 2020, 13:39 IST
‘ದಿ ಶೌರ್ಯ ಅನ್‌ಬಾಂಡ್‌’ ಕೃತಿಯನ್ನು ಓಂ ಬಿರ್ಲಾ ಅವರು ಭಾನುವಾರ ಬಿಡುಗಡೆಗೊಳಿಸಿದರು.
‘ದಿ ಶೌರ್ಯ ಅನ್‌ಬಾಂಡ್‌’ ಕೃತಿಯನ್ನು ಓಂ ಬಿರ್ಲಾ ಅವರು ಭಾನುವಾರ ಬಿಡುಗಡೆಗೊಳಿಸಿದರು.   

ನವದೆಹಲಿ: ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ತನ್ನ ಪಡೆಯ ವೀರ ಹುತಾತ್ಮ, ಧೈರ್ಯಶಾಲಿ 13 ಯೋಧರ ಸಾಹಸ ಕುರಿತಾದ ‘ದಿ ಶೌರ್ಯ ಅನ್‌ಬಾಂಡ್‌’ ಎಂಬ ಕೃತಿಯನ್ನು ಹೊರತಂದಿದೆ. ಈ ವಿಶೇಷ ಕೃತಿಯು 2001ರಲ್ಲಿ ಸಂಸತ್‌ ಭವನ ದಾಳಿ ವೇಳೆ ಹುತಾತ್ಮರಾದ ಕಮಲೇಶ್‌ ಕುಮಾರಿ ಅವರ ಜೀವನಗಾಥೆಯನ್ನೂ ಒಳಗೊಂಡಿದೆ.

ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು ಭಾನುವಾರ ಈ ಕೃತಿಯನ್ನು ಬಿಡುಗಡೆಗೊಳಿಸಿದರು.

’ಈ ಕೃತಿಯನ್ನು ಓದಿದ ಎಲ್ಲರೂ ಹೆಮ್ಮೆ ಪಡುತ್ತಾರೆ ಹಾಗೂ ಮುಂದಿನ ಪೀಳಿಗೆಗೆ ಇದು ಸ್ಫೂರ್ತಿಯಾಗಲಿದೆ‘ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಸಿಆರ್‌ಪಿಎಫ್‌ ಡಿಜಿ ಎ.ಪಿ ಮಹೇಶ್ವರಿ ಅವರು, ’ಸಿಆರ್‌ಪಿಎಫ್‌ ವೀರಯೋಧರ ಜೀವನಚರಿತ್ರೆಯನ್ನೊಳಗೊಂಡ ಸರಣಿ ಕೃತಿಗಳನ್ನು ಪ್ರಕಟಿಸುವ ಯೋಜನೆ ಇದೆ‘ ಎಂದು ಅವರು ತಿಳಿಸಿದ್ದಾರೆ.

ಸರಣಿಯ ಮೊದಲ ಕೃತಿಯಲ್ಲಿ ಸಿಆರ್‌ಪಿಎಫ್‌ನ ಧೈರ್ಯಶಾಲಿ 13 ಯೋಧರ ಜೀವನಕತೆಯನ್ನೊಳಗೊಂಡಿದೆ. ’ಈ ಕೃತಿಯಲ್ಲಿನ ಎಲ್ಲಾ ಯೋಧರು ತಮ್ಮ ಕರ್ತವ್ಯವನ್ನು ಕೆಚ್ಚೆದೆ, ಅಗಾಧ ಧೈರ್ಯ ಹಾಗೂ ಬದ್ಧತೆಯಿಂದ ನಿರ್ವಹಿಸಿದ್ದರು‘ ಎಂದು ಮಹೇಶ್ವರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.