ADVERTISEMENT

ತನ್ನ ಸಬ್ ಇನ್ಸ್‌ಪೆಕ್ಟರನ್ನೇ ಹತ್ಯೆ ಮಾಡಿದ CRPF ಹೆಡ್‌ಕಾನ್‌ಸ್ಟೆಬಲ್

ಪಿಟಿಐ
Published 26 ಡಿಸೆಂಬರ್ 2021, 9:58 IST
Last Updated 26 ಡಿಸೆಂಬರ್ 2021, 9:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ಕರ್ತವ್ಯ ಹಂಚಿಕೆ ವಿಚಾರವಾಗಿ ಸಿಆರ್‌ಪಿಎಫ್‌ ಸಬ್ ಇನ್ಸ್‌ಪೆಕ್ಟರ್‌ ಒಬ್ಬರನ್ನು ಸಹೋದ್ಯೋಗಿಯೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಛತ್ತೀಸ್‌ಗಢದ ಗಡಿಗೆ ಹೊಂದಿಕೊಂಡಿರುವ ತೆಲಂಗಾಣದ ಮುಲಗು ಜಿಲ್ಲೆಯ ವೆಂಕಟಾಪುರ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಉಮೇಶ್ ಚಂದ್ರ (45) ಮೃತಸಬ್ ಇನ್ಸ್‌ಪೆಕ್ಟರ್‌.

ಸಿಆರ್‌ಪಿಎಫ್‌ ಹೆಡ್‌ಕಾನ್‌ಸ್ಟೆಬಲ್ ಸ್ಟಿಫನ್ ಎಂಬುವರು ಕರ್ತವ್ಯ ಹಂಚಿಕೆ ವಿಷಯವಾಗಿ ಉಮೇಶ್ ಚಂದ್ರ ಅವರ ಜೊತೆ ಜಗಳವಾಡಿ ಸ್ವಯಂಚಾಲಿತ ಬಂದೂಕಿನಿಂದ ಉಮೇಶ್‌ ಚಂದ್ರ ಅವರ ಹೊಟ್ಟೆ ಹಾಗೂ ತಲೆಗೆ ಗುಂಡಿಕ್ಕಿದ್ದಾರೆ. ಇದರಿಂದ ಉಮೇಶ್ ಚಂದ್ರ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಅಲ್ಲದೇ ಸ್ಟಿಫನ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ. ಘಟನೆ ಬೆಳಿಗ್ಗೆ 8.30 ರ ಸುಮಾರಿಗೆನಡೆದಿದ್ದು ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಮುಲಗು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಉಮೇಶ್‌ ಚಂದ್ರ ಬಿಹಾರದವರಾಗಿದ್ದು, ಸ್ಟಿಫನ್ ತಮಿಳುನಾಡು ಮೂಲದವರಾಗಿದ್ದರು. ಸಿಆರ್‌ಪಿಎಫ್‌ನ 39 ನೇ ಬೆಟಾಲಿಯನ್‌ನಲ್ಲಿ ಈ ಇಬ್ಬರೂ ಕಾರ್ಯನಿರ್ವಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.