ADVERTISEMENT

ಡ್ರಗ್ಸ್ ಪ್ರಕರಣ: ಮುಂಬೈನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಎನ್‌ಸಿಬಿ ವಿಚಕ್ಷಣಾ ದಳ

ಪಿಟಿಐ
Published 8 ನವೆಂಬರ್ 2021, 9:52 IST
Last Updated 8 ನವೆಂಬರ್ 2021, 9:52 IST
ಕ್ರೂಸ್‌ ಡ್ರಗ್ಸ್‌ ಪ್ರಕರಣದ ತನಿಖೆಗಾಗಿ ಸೋಮವಾರ ಮುಂಬೈಗೆ ಬಂದಿಳಿದ ಎನ್‌ಸಿಬಿ ಉತ್ತರ ವಯಲಯದ ಉಪ ಮಹಾ ನಿರ್ದೇಶಕ ಗ್ಯಾನೇಶ್ವರ್ ಸಿಂಗ್‌
ಕ್ರೂಸ್‌ ಡ್ರಗ್ಸ್‌ ಪ್ರಕರಣದ ತನಿಖೆಗಾಗಿ ಸೋಮವಾರ ಮುಂಬೈಗೆ ಬಂದಿಳಿದ ಎನ್‌ಸಿಬಿ ಉತ್ತರ ವಯಲಯದ ಉಪ ಮಹಾ ನಿರ್ದೇಶಕ ಗ್ಯಾನೇಶ್ವರ್ ಸಿಂಗ್‌   

ಮುಂಬೈ: ವಿವಾದಾತ್ಮಕ ಕ್ರೂಸ್ ಡ್ರಗ್ಸ್ ಪ್ರಕರಣದ ತನಿಖೆಗಾಗಿ ದೆಹಲಿಯ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ವಿಚಕ್ಷಣಾ ತಂಡವು ಸೋಮವಾರ ಮುಂಬೈಗೆ ಬಂದಿಳಿದಿದೆ.

ಎನ್‌ಸಿಬಿ ತಂಡವು ಶಾರುಕ್ ಖಾನ್‌ ಅವರ ಮ್ಯಾನೇಜರ್ ಪೂಜಾ ದಡ್ಲಾನಿ ಮತ್ತು ಎನ್‌ಸಿಬಿಯ ಸಾಕ್ಷಿದಾರ ಕೆ.ಪಿ.ಗೋಸ್ವಾಮಿ ಅವರು ಭೇಟಿ ನೀಡಿದ್ದ ಲೋವೆರ್ ಪಾರೆಲ್‌ ಪ್ರದೇಶದಲ್ಲಿರುವ ಇಂಡಿಯಾನ ಹೋಟೆಲ್‌ ಹೊರ ವಲಯಕ್ಕೆ ಭೇಟಿ ನೀಡಿತು.

ತಂಡದ ಸದಸ್ಯರು ಅ.2ರಂದು ಪಾರ್ಟಿ ಆಯೋಜಿಸಿದ್ದ ಕಾರ್ಡೆಲಿಯಾ ಕ್ರೂಸ್‌ ಹಡಗು ಲಂಗರು ಹಾಕಿದ್ದ ಮುಂಬೈ ಕ್ರೂಸ್‌ ಟರ್ಮಿನಲ್‌ಗೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಎನ್‌ಸಿಬಿಯ ಉತ್ತರ ವಲಯದ ಉಪ ಮಹಾ ನಿರ್ದೇಶಕ ಗ್ಯಾನೇಶ್ವರ್ ಸಿಂಗ್‌ ನೇತೃತ್ವದ ನಾಲ್ಕೈದು ಸದಸ್ಯರನ್ನೊಳಗೊಂಡ ವಿಚಕ್ಷಣಾ ದಳ, ಸ್ವತಂತ್ರ ಸಾಕ್ಷಿದಾರ ಪ್ರಭಾಕರ ಸೈಲ್ ಅವರ ಹೇಳಿಕೆ ದಾಖಲಿಸಿಕೊಳ್ಳುವುದು ಸೇರಿದಂತೆ, ಇನ್ನೂ ಕೆಲವು ಪ್ರದೇಶಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.