ADVERTISEMENT

ಕ್ರಿಪ್ಟೋಕರೆನ್ಸಿ ಖಾತೆ ಹ್ಯಾಕ್: ₹12 ಲಕ್ಷ ಕಳೆದುಕೊಂಡ ವ್ಯಕ್ತಿ

ಪಿಟಿಐ
Published 16 ಜನವರಿ 2023, 6:41 IST
Last Updated 16 ಜನವರಿ 2023, 6:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಥಾಣೆ(ಮಹಾರಾಷ್ಟ್ರ): ಕೆಲಸದ ನಿಮಿತ್ತ ಥಾಣೆಗೆ ಬಂದಿದ್ದ, ಮುಂಬೈನ 37 ವರ್ಷದ ವ್ಯಕ್ತಿಯೊಬ್ಬರ ಕ್ರಿಪ್ಟೋಕರೆನ್ಸಿ ಖಾತೆಯನ್ನು ಅಪರಿಚಿತ ವ್ಯಕ್ತಿಯೊಬ್ಬ ಹ್ಯಾಕ್ ಮಾಡಿದ್ದಾನೆ.

ಆರೋಪಿಯು ಸುಮಾರು ₹12 ಲಕ್ಷ ರೂಪಾಯಿ ಮೌಲ್ಯದ 15,097 ಅಮೆರಿಕ ಡಾಲರ್ ದೋಚಿದ್ದಾನೆ. ನವೆಂಬರ್ 1ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆನ್ ಲೈನ್ ಮೂಲಕ ವ್ಯಕ್ತಿಯ ಕ್ರಿಪ್ಟೋ ಖಾತೆಯನ್ನು ಹ್ಯಾಕ್ ಮಾಡಿದ್ದಾನೆ. ಆ ಹಣವು ನೇರವಾಗಿ ಕಂಪನಿಯೊಂದರ ಖಾತೆಗೆ ವರ್ಗಾವಣೆಗೊಂಡಿದೆ. ವಂಚನೆ ನಡೆದು ಎರಡು ತಿಂಗಳು ಕಳೆದರೂ ದೂರು ದಾಖಲಿಸದ ಬಗ್ಗೆ ಸಂತ್ರಸ್ತ ವ್ಯಕ್ತಿಯೂ ಯಾವುದೇ ಕಾರಣ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ಧಾರೆ.

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.