ADVERTISEMENT

'ಬುರೇವಿ'| ಕೇರಳ, ತಮಿಳುನಾಡಿಗೆ ಎಲ್ಲಾ ನೆರವು ನೀಡಲಿದೆ ಕೇಂದ್ರ: ಅಮಿತ್‌ ಶಾ

ಪಿಟಿಐ
Published 3 ಡಿಸೆಂಬರ್ 2020, 8:16 IST
Last Updated 3 ಡಿಸೆಂಬರ್ 2020, 8:16 IST
ಅಮಿತ್‌ ಶಾ
ಅಮಿತ್‌ ಶಾ   

ನವದೆಹಲಿ: ದಕ್ಷಿಣ ಕರಾವಳಿಯಲ್ಲಿ ‘ಬುರೇವಿ’ ಚಂಡಮಾರುತದಿಂದಾಗಿ ಭೂ ಕುಸಿತಗಳು ಸಂಭವಿಸುವ ಸಾಧ್ಯತೆಗಳಿದ್ದು, ಕೇರಳ ಮತ್ತು ತಮಿಳುನಾಡಿನ ಜನರಿಗೆ ಸಾಧ್ಯವಾಗುವ ಎಲ್ಲಾ ನೆರವುಗಳನ್ನು ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಅಮಿತ್‌ ಶಾ ಅವರು ಗುರುವಾರ ಭರವಸೆ ನೀಡಿದರು.

ಈ ಬಗ್ಗೆ ಅಮಿತ್‌ ಶಾ ಅವರು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಪಿಣರಾಯಿ ವಿಜಯನ್‌ ಅವರಿಗೆ ಫೋನ್‌ ಕರೆ ಮೂಲಕ ತಿಳಿಸಿದರು.

‘ಬುರೇವಿ’ ಚಂಡಮಾರುತದ ಬಗ್ಗೆ ತಮಿಳುನಾಡು ಮತ್ತು ಕೇರಳ ಮುಖ್ಯ ಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಈ ಎರಡು ರಾಜ್ಯಗಳ ಜನರಿಗೆ ಎಲ್ಲಾ ರೀತಿಯ ನೆರವುಗಳನ್ನು ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಎನ್‌ಡಿಆರ್‌ಎಫ್‌ನ ಹಲವು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಮಿತ್‌ ಶಾ ಟ್ವೀಟ್ ಮಾಡಿದ್ದಾರೆ.

ADVERTISEMENT

ಬುರೇವಿ ಚಂಡಮಾರುತವುಶುಕ್ರವಾರ ದಕ್ಷಿಣ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆಯು ಕೇರಳ ಮತ್ತು ತಮಿಳುನಾಡಿನ ದಕ್ಷಿಣ ಭಾಗಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.