ADVERTISEMENT

ಆಸ್ಟ್ರೇಲಿಯಾದಲ್ಲಿ ಚಂಡಮಾರುತ: ಅಪಾರ ಹಾನಿ

ವಿದ್ಯುತ್‌ ಪೂರೈಕೆ ವ್ಯವಸ್ಥೆಗೆ ಧಕ್ಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 10:09 IST
Last Updated 12 ಏಪ್ರಿಲ್ 2021, 10:09 IST
ಆಸ್ಟ್ರೇಲಿಯಾದದಲ್ಲಿ ಸಂಭವಿಸಿದ ಚಂಡಮಾರುತದಿಂದ ಕರ್ನಾರ್ವೋನ್‌ನಲ್ಲಿ ’ಜೆಟ್ಟಿ’ಗೆ ಹಾನಿಯಾಗಿದೆ.  ರಾಯಿಟರ್ಸ್‌ ಚಿತ್ರ
ಆಸ್ಟ್ರೇಲಿಯಾದದಲ್ಲಿ ಸಂಭವಿಸಿದ ಚಂಡಮಾರುತದಿಂದ ಕರ್ನಾರ್ವೋನ್‌ನಲ್ಲಿ ’ಜೆಟ್ಟಿ’ಗೆ ಹಾನಿಯಾಗಿದೆ.  ರಾಯಿಟರ್ಸ್‌ ಚಿತ್ರ   

ಪರ್ತ್‌(ಆಸ್ಟ್ರೇಲಿಯಾ): ಭೀಕರ ಚಂಡಮಾರುತದಿಂದ ಆಸ್ಟ್ರೇಲಿಯಾದ ಹಲವು ನಗರಗಳಲ್ಲಿ ಅಪಾರ ಹಾನಿ ಸಂಭವಿಸಿದೆ.

ವಿದ್ಯುತ್‌ ಪೂರೈಕೆ ವ್ಯವಸ್ಥೆಗೆ ಧಕ್ಕೆಯಾಗಿರುವುದರಿಂದ ಕೆಲವು ನಗರಗಳಲ್ಲಿ ಕಗ್ಗತ್ತಲು ಆವರಿಸಿದೆ. ಸುಮಾರು 31 ಸಾವಿರ ಗ್ರಾಹಕರಿಗೆ ತೊಂದರೆಯಾಗಿದೆ.

‘ಸೆರೊಜಾ’ ಚಂಡಮಾರುತ ಪಶ್ಚಿಮ ಆಸ್ಟ್ರೇಲಿಯಾದ ಪ್ರದೇಶಗಳಿಗೆ ಅಪ್ಪಳಿಸಿದೆ. 170 ಕಿಲೋ ಮೀಟರ್‌ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ.

ADVERTISEMENT

ಕಲ್ಬಾರ್ರಿ ನಗರದಲ್ಲಿ ಶೇಕಡ 70ರಷ್ಟು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪ್ರೇಲಿಯಾದಲ್ಲಿ ಬಲವಾದ ಚಂಡಮಾರುತ ಅಪ್ಪಳಿಸುವುದು ಅಪರೂಪ. ಕಳೆದ 50 ವರ್ಷಗಳಲ್ಲೇ ಇದು ಬಲಿಷ್ಠ ಚಂಡಮಾರುತವಾಗಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ತಿಳಿಸಿದೆ.

ಇಂಡೊನೇಷ್ಯಾ ಮತ್ತು ಪೂರ್ವ ತಿಮೊರ್‌ನಲ್ಲಿ ಕಳೆದ ವಾರ ಅಪ್ಪಳಿಸಿದ್ದ ‘ಸೆರೊಜಾ’ ಚಂಡಮಾರುತದಿಂದ ಭೂಕುಸಿತ ಮತ್ತು ಪ್ರವಾಹ ಸಂಭವಿಸಿದ್ದರಿಂದ 174ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.