ADVERTISEMENT

ತಮಿಳುನಾಡಿಗೆ ಚಂಡಮಾರುತದ ಮುನ್ಸೂಚನೆ

ಏಜೆನ್ಸೀಸ್
Published 25 ಏಪ್ರಿಲ್ 2019, 10:16 IST
Last Updated 25 ಏಪ್ರಿಲ್ 2019, 10:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹಿಂದೂ ಮಹಾಸಾಗರ ಮತ್ತು ಆಗ್ನೇಯ ಬಂಗಾಳ ಕೊಲ್ಲಿ ಪಕ್ಕದಲ್ಲಿರುವ ಕಡಿಮೆ ಒತ್ತಡ ಪ್ರದೇಶದಲ್ಲಿ ಚಂಡಮಾರುತ ಶಕ್ತಿ ಗಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಹೇಳಿದೆ.

ಈ ಚಂಡಮಾರುತ ಮತ್ತಷ್ಟು ಪ್ರಬಲವಾಗಿ ಪಶ್ಚಿಮ ಮತ್ತು ವಾಯವ್ಯ ಭಾಗಕ್ಕೆ ಸಂಚರಿಸಲಿದೆ.ಚಂಡಮಾರುತದ ದಿಶೆಯು ಸಮುದ್ರ ಮಟ್ಟದಿಂದ 3.1 ಕಿಮೀ ಮೇಲೆ ಇದ್ದು, ಹಿಂದೂ ಮಹಾಸಾಗರದಮಧ್ಯೆ ಮತ್ತು ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯಭಾಗದಿಂದ ಆಗ್ನೇಯ ಶ್ರೀಲಂಕಾದ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗಲಿದೆ.

ಮುಂದಿನ 36 ಗಂಟೆಗಳಲ್ಲಿ ಇದು ಮತ್ತಷ್ಟು ಪ್ರಬಲಗೊಳ್ಳಲಿದ್ದು, ತಮಿಳುನಾಡಿನ ಕರಾವಳಿ ಮತ್ತು ಶ್ರೀಲಂಕಾದ ಪೂರ್ವ ಕರಾವಳಿಯತ್ತ ಮುನ್ನುಗ್ಗಲಿದೆ. 48 ಗಂಟೆಗಳಲ್ಲಿ ಇದು ಇನ್ನಷ್ಟು ಪ್ರಬಲವಾಗಲಿದೆ.

ADVERTISEMENT

ತಮಿಳುನಾಡು ಮತ್ತು ಪುದುಚ್ಚೇರಿಯ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ ಹವಾಮಾನ ಇಲಾಖೆ, ಭಾರಿ ಗಾಳಿ ಮತ್ತು ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.