
ಆಂಧ್ರಪ್ರದೇಶದ ಹಲವೆಡೆ ಮೊಂಥಾ ಚಂಡಮಾರುತದಿಂದ ಸುರಿದ ಮಳೆಗೆ ಜಲಾವೃತವಾದ ಭೂಪ್ರದೇಶ
ಪಿಟಿಐ ಚಿತ್ರ
ಅಮರಾವತಿ: ಮೊಂಥಾ ಚಂಡಮಾರುತದಿಂದ ಸುರಿದ ಭಾರಿ ಮಳೆಯಿಂದ ರಾಜ್ಯಕ್ಕೆ ₹5,265 ಕೋಟಿ ನಷ್ಟವಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗುರುವಾರ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ರಸ್ತೆ ಮತ್ತು ಕಟ್ಟಡಗಳಿಗೆ ಉಂಟಾದ ಹಾನಿಯಿಂದ ₹2,079 ಕೋಟಿ ನಷ್ಟವಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಕೃಷಿ ಕ್ಷೇತ್ರದಲ್ಲಿ ₹829 ಕೋಟಿ, ತೋಟಗಾರಿಕೆಯಲ್ಲಿ ₹40 ಕೋಟಿ, ರೇಷ್ಮೆ ಕೃಷಿಯಲ್ಲಿ ₹65 ಲಕ್ಷ ನಷ್ಟವಾಗಿದೆ.
ಮೀನುಗಾರಿಕೆಯಲ್ಲಿ ₹1,270 ಕೋಟಿ, ಪುರಸಭೆ ವ್ಯಾಪ್ತಿಯಲ್ಲಿ ₹109 ಕೋಟಿ, ನೀರಾವರಿ ಇಲಾಖೆಯಲ್ಲಿ ₹207 ಕೋಟಿ, ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಕೆ ಇಲಾಖೆಯಲ್ಲಿ ₹1.2 ಕೋಟಿ, ಪಂಚಾಯತ್ ರಾಜ್ ಇಲಾಖೆಯಲ್ಲಿ ₹ 9 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ₹ 1.52 ನಷ್ಟವಾಗಿದೆ.
ನೆರೆಯಿಂದಾದ ನಷ್ಟದ ಮಾಹಿತಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ, ಇದರಿಂದಾಗಿ ಚಂಡಮಾರುತದಿಂದ ಸಂಭವಿಸಬಹುದಾದ ಹಾನಿಯ ಪ್ರಮಾಣವನ್ನು ತಗ್ಗಿಸಲಾಗಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.