ADVERTISEMENT

ತೌತೆ ಚಂಡಮಾರುತದಿಂದ ಗುಜರಾತ್‌ನಲ್ಲಿ ಸತ್ತವರ ಸಂಖ್ಯೆ 53

ಪಿಟಿಐ
Published 20 ಮೇ 2021, 7:42 IST
Last Updated 20 ಮೇ 2021, 7:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಹಮದಾಬಾದ್‌: ತೌತೆ ಚಂಡಮಾರುತದಿಂದ ಗುಜರಾತ್‌ ರಾಜ್ಯದ ವಿವಿಧೆಡೆ ಸುಮಾರು 53 ಮಂದಿ ಸಾವಿಗೀಡಾಗಿದ್ದಾರೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ಬಹುತೇಕ ಅನಾಹುತಗಳು ಗೋಡೆ ಕುಸಿತದಂತಹ ಘಟನೆಗಳಿಂದಾಗಿಯೇ ನಡೆದಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯಕ್ಕೆ ತುರ್ತು ಪರಿಹಾರ ಕಾರ್ಯಗಳಿಗಾಗಿ ₹ 1,000 ಕೋಟಿ ನೆರವು ಪ್ರಕಟಿಸಿದ್ದರು.

ADVERTISEMENT

ಚಂಡಮಾರುತದಿಂದ ಆದ ಅವಘಡಗಳಲ್ಲಿ ಗಾಯಗೊಂಡವರಿಗೆ ₹ 50,000 ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರು ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.