ADVERTISEMENT

ಬಂಗಾಳ ಕೊಲ್ಲಿಯಲ್ಲಿ ಚಂಡುಮಾರುತ ಸಾಧ್ಯತೆ; ಮುನ್ನೆಚ್ಚರಿಕೆ

ಪಿಟಿಐ
Published 2 ಮೇ 2023, 14:35 IST
Last Updated 2 ಮೇ 2023, 14:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮೇ 6ರ ಸುಮಾರಿಗೆ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ.

ಚಂಡಮಾರುತ ರಚನೆಯಾಗುವ ಕುರಿತು ಅಮೆರಿಕ (ಜಿಎಫ್‌ಎಸ್) ಮತ್ತು ಯುರೋಪ್ ಕೇಂದ್ರ (ಇಸಿಎಂಡಬ್ಲ್ಯುಎಫ್) ವರದಿ ಮಾಡಿದ ಬೆನ್ನಲ್ಲೇ ಐಎಂಡಿ ಎಚ್ಚರಿಕೆ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪಗೊಳ್ಳುವ ಸಾಧ್ಯತೆಯಿದೆ. ನಾವು ನಿಗಾ ವಹಿಸುತ್ತಿದ್ದೇವೆ. ನಿರಂತರ ಮಾಹಿತಿ ನೀಡಲಾಗುವುದು ಎಂದು ಐಎಂಡಿ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

ADVERTISEMENT

ಭಾರತದ ಸಾಗರದಲ್ಲಿ ಏಪ್ರಿಲ್‌ನಲ್ಲಿ ಯಾವುದೇ ಚಂಡಮಾರುತ ಉಂಟಾಗಿಲ್ಲ. ಈ ಮೂಲಕ ಸತತ ನಾಲ್ಕನೇ ವರ್ಷವೂ ಏಪ್ರಿಲ್‌ನಲ್ಲಿ ಚಂಡಮಾರುತ ಕಂಡುಬಂದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.