ADVERTISEMENT

ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಡಿ.ರಾಜಾ ನೇಮಕ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 13:04 IST
Last Updated 21 ಜುಲೈ 2019, 13:04 IST
   

ನವದೆಹಲಿ: ತಮಿಳುನಾಡಿನ ರಾಜ್ಯಸಭಾಸಂಸದ, ಹಿರಿಯ ಮುಖಂಡ ಡಿ.ರಾಜಾ ಅವರು ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.ಈ ಹುದ್ದೆಗೇರಿರುವ ಮೊದಲ ದಲಿತ ನಾಯಕರಾಗಿದ್ದಾರೆ ಇವರು.ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಸ್. ಸುಧಾಕರ್ ರೆಡ್ಡಿ ಅವರು ಅನಾರೋಗ್ಯ ಕಾರಣದಿಂದ ಪೂರ್ಣಾವಧಿ ಮುಗಿಯುವ ಮುನ್ನವೇ ಪ್ರಸ್ತುತ ಸ್ಥಾನದಿಂದ ಕೆಳಗಿಳಿದಿರುವುದರಿಂದ ಡಿ. ರಾಜಾ ಅವರನ್ನು ಕಾರ್ಯದರ್ಶಿ ಆಗಿ ಆಯ್ಕೆ ಮಾಡಲಾಗಿದೆ.

ಭಾನುವಾರ ಹೊಸ ಜವಾಬ್ದಾರಿ ವಹಿಸಿಕೊಂಡ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜಾ, ಪ್ರತಿಗಾಮಿ ಶಕ್ತಿಗಳ ವಿರುದ್ಧದ ಹೋರಾಟ ಮುಂದುವರಿಯಲಿದೆ. ನರೇಂದ್ರ ಮೋದಿಯವರ ನಿರಂಕುಶ ಪ್ರಭುತ್ವದಲ್ಲಿ ಈ ದೇಶವಿದೆ. ಲೋಕಸಭಾ ಚುನಾವಣೆಯಲ್ಲಿ ಎಡಪಕ್ಷಗಳು ಸೋಲು ಅನುಭವಿಸಿರಬಹುದು.ಸಂಸತ್ತಿನಲ್ಲಿ ಅವರ ಶಕ್ತಿ ಕಡಿಮೆ ಆಗಿರಬಹುದು. ಆದರೆ ನಾವು ನಮ್ಮ ದೇಶದಲ್ಲಿ ಕುಗ್ಗಿ ಹೋಗಿದ್ದೇನೆ ಎಂದು ಅರ್ಥವಲ್ಲ. ನಮ್ಮ ವಿಚಾರಧಾರೆ ಮತ್ತು ರಾಜಕೀಯ ಪ್ರಭಾವ ಕುಂದಿ ಹೋಗಿಲ್ಲ ಎಂದಿದ್ದಾರೆ.

ಬಿಜೆಪಿ ಚುನಾವಣೆ ಗೆದ್ದಿರಬಹುದು ಆದರೆ ಸಾಮಾಜಿಕ ಅಥವಾ ರಾಜಕೀಯದಲ್ಲಿ ಅವರು ಗೆದ್ದಿಲ್ಲ. ಎಲ್ಲ ಕಮ್ಯುನಿಸ್ಟ್ ಪಕ್ಷಗಳು ಒಗ್ಗಟ್ಟಾಗಿ ಬರಬೇಕು ಎಂದು ನಾವು ಬಯಸುತ್ತೇವೆ.ನಾವು ಮತ್ತೊಮ್ಮೆಜತೆಯಾಗಿ ಕಾರ್ಯತಂತ್ರ ರೂಪಿಸಬೇಕಿದೆ. ಅದನ್ನೇ ನಮ್ಮ ಪಕ್ಷ ಮಾಡುತ್ತಿದೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.