ADVERTISEMENT

ಡಾಬರ್‌ ಚ್ಯವನಪ್ರಾಶ್‌ ಕುರಿತ ಆಕ್ಷೇಪಾರ್ಹ ಅಂಶ ತೆಗೆಯಿರಿ: ದೆಹಲಿ ಹೈಕೋರ್ಟ್‌

ಪಿಟಿಐ
Published 23 ಸೆಪ್ಟೆಂಬರ್ 2025, 16:16 IST
Last Updated 23 ಸೆಪ್ಟೆಂಬರ್ 2025, 16:16 IST
   

ನವದೆಹಲಿ: ಪತಂಜಲಿ ಸಂಸ್ಥೆಯು ತನ್ನ ಚ್ಯವನಪ್ರಾಶ್‌ ಉತ್ಪನ್ನಕ್ಕೆ ಸಂಬಂಧಿಸಿದ ಜಾಹಿರಾತಿನಲ್ಲಿ ‘ಡಾಬರ್ ಚ್ಯವನಪ್ರಾಶ್‌’ ಕುರಿತ ಅವಹೇಳನಕಾರಿ ಅಂಶವನ್ನು ತೆಗದುಹಾಕುವಂತೆ ದೆಹಲಿ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ. 

ಪತಂಜಲಿ ಚ್ಯವನಪ್ರಾಶ್‌ ಉತ್ಪನ್ನದ ಜಾಹಿರಾತಿನಲ್ಲಿ, ‘40 ಗಿಡಮೂಲಿಕೆಗಳಿಂದ ಉತ್ಪಾದಿಸಿರುವ ಸಾಮಾನ್ಯ ಚ್ಯವನ್‌ಪ್ರಾಶ್‌ ಅನ್ನು ಏಕೆ ಬಳಸುವಿರಿ’ ಎಂಬ ವಾಕ್ಯವನ್ನು ಬಳಸಲಾಗಿತ್ತು.

ಡಾಬರ್‌ ಸಂಸ್ಥೆಯ ಉತ್ಪನ್ನದ ಕುರಿತು ಉಲ್ಲೇಖಿಸಿರುವ ‘40 ಗಿಡಮೂಲಿಕೆಗಳಿಂದ ಉತ್ಪಾದಿಸಿರುವ’ ಎಂಬ ಪದಗಳನ್ನು ತೆಗೆದುಹಾಕುವಂತೆ ನ್ಯಾಯಮೂರ್ತಿಗಳಾದ ಹರಿ ಶಂಕರ್‌ ಹಾಗೂ ಓಂ ಪ್ರಕಾಶ್‌ ಶುಕ್ಲಾ ಅವರ ಪೀಠವು ಪತಂಜಲಿಗೆ ನಿರ್ದೇಶಿಸಿದೆ.

ADVERTISEMENT

ಜತೆಗೆ ‘ಸಾಮಾನ್ಯ ಡಾಬರ್‌ ಚ್ಯವನ್‌ಪ್ರಾಶ್‌ ಅನ್ನು ಏಕೆ ಬಳಸುವಿರಿ’ ಎಂಬ ಸಾಲನ್ನು ಬೇಕಿದ್ದರೆ ಬಳಸಿಕೊಳ್ಳಬಹುದು ಎಂದಿದೆ. 

ಡಾಬರ್‌ ಸಂಸ್ಥೆಯು ಸಂಪೂರ್ಣ ಜಾಹಿರಾತಿಗೆ ತಡೆ ಕೋರಿದ್ದ ಅರ್ಜಿಯನ್ನು ಈ ಹಿಂದೆ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಪತಂಜಲಿ ಸಂಸ್ಥೆಯು ಮೇಲ್ಮನವಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.