ADVERTISEMENT

ಆಧ್ಯಾತ್ಮ ಗುರು ದಾದಾ ವಾಸ್ವಾನಿ ನಿಧನ 

​ಪ್ರಜಾವಾಣಿ ವಾರ್ತೆ
Published 12 ಜುಲೈ 2018, 8:25 IST
Last Updated 12 ಜುಲೈ 2018, 8:25 IST
ದಾದಾ ವಾಸ್ವಾನಿ (ಸಂಗ್ರಹ ಚಿತ್ರ).
ದಾದಾ ವಾಸ್ವಾನಿ (ಸಂಗ್ರಹ ಚಿತ್ರ).   

ಪುಣೆ: ಸಾಧು ವಾಸ್ವಾನಿ ಮಿಶನ್‌ ಮುಖ್ಯಸ್ಥ ಹಾಗೂ ಪ್ರಖ್ಯಾತ ಆಧ್ಯಾತ್ಮ ಗುರುದಾದಾ ಜೆ.ಪಿ. ವಾಸ್ವಾನಿ (99) ಅವರು ಗುರುವಾರ ನಿಧನರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಸ್ಯಾಹಾರ ಉತ್ತೇಜಿಸಲು ಮತ್ತು ಪ್ರಾಣಿ ಹಕ್ಕುಗಳ ಪ್ರಚಾರಕರಾಗಿ ಗುರುತಿಸಿಕೊಂಡಿದ್ದರು. ಜತೆಗೆ, ಅವರು 150ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.

ADVERTISEMENT

2017ರಲ್ಲಿ ವಾಸ್ವಾನಿ ಅವರ99 ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ಮೋದಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಶುಭ ಹಾರೈಸಿದ್ದರು.

ಮುಂದಿನ ತಿಂಗಳ ಶತಾಯುಷಿ ಆಗಲಿದ್ದ ವಾಸ್ವಾನಿ ಅವರ 100ನೇ ಹುಟ್ಟು ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ಮಿಶನ್‌ ಸಕಲ ಸಿದ್ಧತೆ ಮಾಡಿಕೊಂಡಿತ್ತು.

ದಾದಾ ವಾಸ್ವಾನಿ ಅವರು ಸೆಪ್ಟೆಂಬರ್‌ 2, 1918 ಪಾಕಿಸ್ತಾನದ ಹೈದರಾಬಾದ್‌ನಲ್ಲಿ ಸಿಂಧಿ ಕುಟುಂಬದಲ್ಲಿ ಜನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.