ADVERTISEMENT

Covid-19 India Update: 91,702 ಹೊಸ ಪ್ರಕರಣ, ಸಾವಿನ ಸಂಖ್ಯೆಯಲ್ಲಿ ಹೆಚ್ಚಳ

ಪಿಟಿಐ
Published 11 ಜೂನ್ 2021, 5:33 IST
Last Updated 11 ಜೂನ್ 2021, 5:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳು ಸತತ ನಾಲ್ಕನೇ ದಿನವೂ ಒಂದು ಲಕ್ಷಕ್ಕಿಂತಲೂ ಕಡಿಮೆ ವರದಿಯಾಗಿದ್ದು, ಇಂದು 91,702 ಹೊಸ ಪ್ರಕರಣಗಳು ಪತ್ತೆಯಾಗಿವೆ. ದೈನಂದಿನ ಸಕಾರಾತ್ಮಕ ಪ್ರಮಾಣವು ಶೇ 4.49ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಶುಕ್ರವಾರ ತಿಳಿಸಿವೆ.

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,92,74,823ಕ್ಕೆ ಏರಿಕೆಯಾಗಿದ್ದು, ಹೊಸದಾಗಿ 3,403 ಜನರ ಸಾವಿನೊಂದಿಗೆ ಮೃತರ ಸಂಖ್ಯೆ 3,63,079ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಸದ್ಯ 11,21,671 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕು ಪ್ರಕರಣಗಳ ಪೈಕಿ ಶೇ 3.83 ರಷ್ಟಿದೆ. ಕೋವಿಡ್-19 ಚೇತರಿಕೆ ಪ್ರಮಾಣವು ಶೇ 94.93ರಷ್ಟಿದೆ.

ADVERTISEMENT

ಜೂ. 10ರ ಹೊತ್ತಿಗೆ ದೇಶದಲ್ಲಿ 37,42,42,384 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಗುರುವಾರ ಒಂದೇ ದಿನ 20,44,131 ಮಾದರಿಗಳು ಪರೀಕ್ಷೆಗೆ ಒಳಪಟ್ಟಿವೆ ಎಂದು ಭಾರತೀಯ ವೈದ್ಯಕೀಯ ಅಧ್ಯಯನ ಸಂಸ್ಥೆ (ಐಸಿಎಂಆರ್‌) ತಿಳಿಸಿದೆ.

ದೈನಂದಿನ ಸಕಾರಾತ್ಮಕ ದರವು ಶೇ 4.49 ರಷ್ಟಿದೆ. ಸತತ 18 ನೇ ದಿನವಾದ ಇಂದು ಶೇ 10 ಕ್ಕಿಂತ ಕಡಿಮೆ ವರದಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸತತ 29ನೇ ದಿನವು ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆಯು ಹೊಸ ಪ್ರಕರಣಗಳಿಗಿಂತಲೂ ಅಧಿಕವಾಗಿದ್ದು, ಒಟ್ಟಾರೆ ಗುಣಮುಖರಾದವರ ಸಂಖ್ಯೆ 2,77,90,073 ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ 1.24 ಕ್ಕೆ ಏರಿದೆ ಎಂದು ಮಾಹಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.